Balsanskar Kannada
Статистикаಈಗಿನ ಮಕ್ಕಳಿಗೆ ಜೀವನದ ನಿಜವಾದ ಉದ್ದೇಶವೇನೆಂದು ಗೊತ್ತಾಗುತ್ತಿಲ್ಲ. ಅದರಿಂದ ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಪ್ರಾರಂಭಿಸುತ್ತಿದ್ದೇವೆ. Like us On Facebook : https://www.facebook.com/Balsanskar.Kannada Follow us On Twitter : https://twitter.com/Balasanskara
- Последний пост
- 29 июн. 2025 г.
- Последнее чтение
- 13 авг.
- Постов за неделю
- 0
- Всего постов
- 20
- Тип
- открытый
- Язык
- kn
- В каталоге с
- 13 авг.
- 1/24сутки в ленте
- —
- 1/48двое суток
- —
- 1/72трое суток
- —
Оценка по просмотрам недавних постов: пост набирает почти всё за первые сутки.
Посты
ಸದಾಚಾರದ ಮಹತ್ವ ಸದಾಚಾರ ಅಂದರೆ ಉತ್ತಮ ಆಚರಣೆಗಳು, ಇವೇ ನಮ್ಮ ಜೀವನದ ಆಧಾರವಾಗಿವೆ. ಸತ್ ಆಚರಣೆಯ ಅರ್ಥವೆಂದರೆ ನೈತಿಕ ಹಾಗೂ ಧಾರ್ಮಿಕ ಆಚರಣೆ ! ದೇವತೆಗಳೂ ಸದಾಚಾರವನ್ನು ಪಾಲಿಸುವವರೊಂದಿಗೆ ಇರುತ್ತಾರೆ ಹಾಗೂ ಯಾರೊಂದಿಗೆ ದೇವತೆಗಳಿದ್ದಾರೆ ಅವರ ಜೀವನವೂ ಆನಂದಮಯವಾಗುತ್ತದೆ. ಇದು ಮಹಾಭಾರತದ ಸಮಯದ ಸಂಗತಿಯಾಗಿದೆ. ಆ ಸಮಯದಲ್ಲಿ ಸತ್ಯದೇವ ಎಂಬ ರಾಜನಿದ್ದನು. ಅವನು ಅತ್ಯಂತ ಸದಾಚಾರಿಯಾಗಿದ್ದನು. ಒಂದು ದಿನ ಅವರು ಬೆಳಗ್ಗೆ ಎದ್ದು ತನ್ನ ಕೋಣೆಯಿಂದ ಹೊರಬಂದಾಗ ಓರ್ವ ಸುಂದರ ಸ್ತ್ರೀಯು ಅರಮನೆಯಿಂದ ಹೊರಗೆ ಹೋಗುತ್ತಿರುವುದನ್ನು ನೋಡಿದನು. ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/6917.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
ಮನಸ್ಸಿನ ರಚನೆ ಮತ್ತು ಕಾರ್ಯ ನಾವು ಯಾವಾಗಲೂ ‘ನನ್ನ ಮನಸ್ಸಿನಲ್ಲಿ ಇಂತಹ ವಿಚಾರ ಬಂತು’, ಅಥವಾ ‘ ನನ್ನ ಮನಸ್ಸಿಗೆ ಹೀಗೆ ಅನ್ನಿಸುತ್ತದೆ’ ಎಂದು ಹೇಳುತ್ತೇವೆ. ಅನೇಕ ಮಿತ್ರರ ‘ಮನಸ್ಸಿನಲ್ಲಿ’ ದೇಶದ ಬಗ್ಗೆ ಅಪಾರ ಗೌರವ ಶ್ರದ್ಧೆ ಇದೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು? ಇಂತಹ ಅನೇಕ ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುತ್ತವೆ. ಈ ಲೇಖನದಿಂದ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ದೊರೆಯಲು ಸಹಾಯವಾಗುವುದು. ಮನಸ್ಸಿನ ರಚನೆ ಮತ್ತು ಕಾರ್ಯ ಮನಸ್ಸಿಗೆ ಎರೆಡು ಭಾಗ ಇರುತ್ತವೆ. ಒಂದು ಬಾಹ್ಯ ಮನಸ್ಸು ಮತ್ತು ಇನ್ನೊಂದು ಅಂತರ್ಮನ. ಅಂತರ್ಮನ ಇದು ಬಾಹ್ಯಮನಕ್ಕಿಂತ ೯ ಪಟ್ಟು ಹೆಚ್ಚು ದೊಡ್ಡದಾಗಿರುತ್ತದೆ. ಮನಸ್ಸಿನ ಎರಡೂ ಭಾಗಗಳ ಕಾರ್ಯ ಬೇರೆ ಬೇರೆ ಇರುತ್ತದೆ. ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/691.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
🌸 ಬಂಕಿಮ್ ಚಂದ್ರ ಚಟರ್ಜಿ ಜಯಂತಿ ! (26/6/25) 🌸 ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು ಎಂಬ ನಂಬಿಕೆ ಇದೆ. ಕ್ರಿ.ಶ. ೧೮೮೨ರಲ್ಲಿ ಈ ಕಾದಂಬರಿ ಪ್ರಕಾಶನಗೊಂಡ ಅಲ್ಪಾವಧಿಯಲ್ಲಿಯೇ ಈ ಗೀತೆ ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣಾ ಸ್ಥಾನವನ್ನು ಗಿಟ್ಟಿಸಿತು. ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/17.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👉: t.me/Balasanskara
ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ ನಾವು ತೀರ್ಥಕ್ಷೇತ್ರ ಮತ್ತು ದೇವಸ್ಥಾನಗಳನ್ನು ಭೇಟಿ ಮಾಡುವಾಗ ನಮ್ಮ ತಪ್ಪು ನಡುವಳಿಕೆಯಿಂದ ಆ ಕ್ಷೇತ್ರದ ಪಾವಿತ್ರ್ಯವನ್ನು ಹಾಳು ಮಾಡಬಾರದು. ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡುವಾಗ ಕೆಲವು ಆಂಶಗಳನ್ನು ಮನಸ್ಸಿನಲ್ಲಿಡಿ ೧. ದೇವಸ್ಥಾನದ ಪರಿಸರದಲ್ಲಿರುವಾಗ ಜೋರಾಗಿ ಮಾತನಾಡುವುದು, ಆಟವಾಡುವುದು, ದೂರವಾಣಿಯಲ್ಲಿ ಜೋರಾಗಿ ಮಾತನಾಡುವುದು ಮಾಡಬಾರದು. ೨. ಪಾದರಕ್ಷೆಗಳನ್ನು ದೇವಸ್ಥಾನದ ಒಳಪರಿಸರದಲ್ಲಿ ಹಾಕಿ ಒಡಾಡಬಾರದು; ಅದು ವಿಹಾರ ತಾಣವಲ್ಲ. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/522.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
ಮಕ್ಕಳೇ, ‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’! ‘ಪ್ರತಿಯೊಬ್ಬರೂ ಕೂಡ ಸೂರ್ಯೋದಯದ ಮುಂಚೆ ಎದ್ದೇಳಬೇಕೆಂದು’ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ; ಆದರೆ ಇತ್ತೀಚಿಗೆ ಮಕ್ಕಳು ಅಧ್ಯಯನ ಅಥವಾ ಇನ್ಯಾವುದಾದರೂ ಕಾರಣದಿಂದ ತಡ ರಾತ್ರಿಯ ತನಕ ಕುಳಿತುಕೊಂಡು ಬೆಳಗ್ಗೆ ೮-೯ ಗಂಟೆಗೆ ಎದ್ದೇಳುವ ಕೆಟ್ಟ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದೆ. ಇದಕ್ಕಿಂತ ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳುವುದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/196.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
🌸 ಆಧ್ಯಾತ್ಮದಲ್ಲಿನ ಮೊದಲನೇ ಪಾಠ : ಅಹಂಕಾರ ಬೇಡ ! 🌸 ರಾಜಾ ಶೂರಸೇನನ ಆಧ್ಯಾತ್ಮದ ಜಿಜ್ಞಾಸೆ, ಆತ್ಮಾನಂದ ಮಹಾರಾಜರ ಮಾರ್ಗದರ್ಶನ ಪಡೆಯುವ ಇಚ್ಛೆ.... ಶೂರಸೇನ ಎಂಬ ಒಬ್ಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ಬಹಳಷ್ಟು ವೃದ್ಧಿಸಿದನು. ಅವನ ಪ್ರಜೆಗಳೂ ಸುಖದಿಂದ ಇದ್ದರು. ರಾಜನಿಗೆ ತನ್ನ ಶೌರ್ಯ, ರಾಜ್ಯ, ಐಶ್ವರ್ಯ ಹಾಗೂ ಕರ್ತೃತ್ವದ ಬಗ್ಗೆ ಬಹಳ ಅಭಿಮಾನವಿತ್ತು. ಅವನಿಗೆ ಆಧ್ಯಾತ್ಮವನ್ನು ಕಲಿಯುವ ತೀವೃ ಇಚ್ಛೆಯಾಯಿತು. ಆಗ ಶೂರಸೇನನು ತನ್ನ ಪ್ರಧಾನಿಯನ್ನು ಕರೆದು ರಾಜ್ಯದಲ್ಲಿ ಸರ್ವಶ್ರೇಷ್ಠ ಆಧ್ಯಾತ್ಮದಲ್ಲಿನ ಅಧಿಕಾರಿಗಳಾದ ಗುರುಗಳನ್ನು ಸತ್ಕರಿಸಿ ಅವರನ್ನು ಪ್ರತಿದಿನ ಆಧ್ಯಾತ್ಮ ಕಲಿಸಲು ಅರಮನೆಗೆ ಕರೆತರಲು ಹೇಳಿದನು. ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/760.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👉 : t.me/Balasanskara
ಚಂಚಲ ಮನಸ್ಸು ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. ಹಲವು ಗಂಟೆಗಳ ಕಾಲ ಅವನು ಬಿಸಿಲಿನಲ್ಲಿ ನಡೆಯುತ್ತಿದ್ದುದರಿಂದ ಬಹಳ ದಣಿದು ಬಸವಳಿದಿದ್ದನು. ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತನು. ಆತನ ಮನಸ್ಸು ಹೀಗೆ ಯೋಚಿಸಿತು. ಇಲ್ಲೇ ಮಲಗಿಕೊಳ್ಳುವುದಕ್ಕೆ ಒಂದು ಮೆತ್ತನೆಯ ಹಾಸಿಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು. ಪೂರ್ವ ಪುಣ್ಯದಿಂದ ಅವನು ಕಲ್ಪವೃಕ್ಷದ ಕೆಳಗೆ ಕುಳಿತಿದ್ದನು. ಆಲೋಚನೆ ಹೊಳೆದ ತಕ್ಷಣವೇ ಒಂದು ಚೆನ್ನಾಗಿರುವ ಹಾಸಿಗೆಯನ್ನು ಪಕ್ಕದಲ್ಲಿ ಕಂಡನು! ಅದನ್ನು ನೋಡಿ ತುಂಬ ಅಚ್ಚರಿಗೊಂಡನು. ಪೂರ್ಣ ಕಥೆ ಓದಿ👇 : https://www.hindujagruti.org/hinduism-for-kids-kannada/620.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
🚩 ರಾಜಮಾತೆ ಜಿಜಾಬಾಯಿ ಆದರ್ಶವನ್ನು ಪಾಲಿಸುವುದು ಅತ್ಯಾವಶ್ಯಕ !🌸 ‘ಛತ್ರಪತಿ ಶಿವಾಜಿಯವರು ಹಿಂದವೀ ಸ್ವರಾಜ್ಯ ಅಂದರೆ ‘ಆದರ್ಶ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿದರು. ಈ ರಾಷ್ಟ್ರವು ನಿರ್ಮಾಣವಾಗಲೆಂದು ರಾಜಮಾತೆ ಜಿಜಾಬಾಯಿ ಶಿವಾಜಿಯ ಬಾಲ್ಯದಲ್ಲಿಯೆ ಇದರ ಬೀಜವನ್ನು ಬಿತ್ತಿದರು. ಅವರಲ್ಲಿ ಜಾಜ್ಜ್ವಲ್ಯಮಾನ ಧರ್ಮಾಭಿಮಾನ ಹಾಗೂ ರಾಷ್ಟ್ರಾಭಿಮಾನವನ್ನು ನಿರ್ಮಿಸಿದರು. ಜಿಜಾಬಾಯಿ ಶಿವಾಜಿಗೆ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಿ ಅವರಲ್ಲಿ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸಿದರು. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/710.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ subscribe ಮಾಡಿ 👇: t.me/Balasanskara
🌳ನೈಸರ್ಗಿಕ ವಿಪತ್ತು – ಕಾರಣಗಳು🌳🌳 ನಿಸರ್ಗವು ಸೇಡು ತಿರಿಸಿಕೊಳ್ಳುತ್ತಿದೆ . ಮುಯ್ಯಿಗೆ ಮುಯ್ಯಿ’ ಇದು ನಿಸರ್ಗದ ಶಾಶ್ವತವಾದ ನಿಯಮವಾಗಿದೆ. ಧರ್ಮಾಚರಣೆ ಮಾಡದಿರುವ ಮಾನವಿ ಪಶುಗಳ ಕ್ರೌರ್ಯವೇ ನಿಸರ್ಗಕ್ಕೆ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ತಂದಿಡುತ್ತದೆ. ‘ಗಿಡಗಳ ರಹಸ್ಯಮಯ ಜೀವನ’ – ಪೀಟರ್ ಟೊಮ್ಕಿನ್ಸ ಹಾಗೂ ಕ್ರಿಸ್ಟೋಫರ್ ಬರ್ಡ್ ಈ ಶಾಸ್ತ್ರಜ್ಞರ ಗ್ರಂಥವು ಆ ನಿಯಮಗಳ ಅತ್ಯುತ್ತಮ ವಿಶ್ಲೇಷಣೆ ಮಾಡಿ ಅದನ್ನು ಸಿದ್ಧಪಡಿಸುತ್ತದೆ. ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/729.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ದ್ರೌಪದಿಯ ಪಾತ್ರೆ ! ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು ೧೨ ವರ್ಷಗಳ ವನವಾಸ ಹಾಗೂ ೧ ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಪೂರ್ಣ ಕಥೆ ಓದಿ 👇: https://www.hindujagruti.org/hinduism-for-kids-kannada/6997.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ subscribe ಮಾಡಿ 👇: t.me/Balasanskara
🌸 ವಟಸಾವಿತ್ರಿ ವ್ರತ (ವಟ ಪೌರ್ಣಿಮೆ) 🌸 ವಟಸಾವಿತ್ರಿಯ ವ್ರತ ಆರಂಭದ ಹಿನ್ನೆಲೆ ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು. ವ್ರತದ ದೇವತೆ : ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/667.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👉: t.me/Balasanskara
🌸 ಶಿವರಾಜ್ಯಾಭಿಷೇಕ ದಿನದ ಮಹತ್ವ ! 🌸 ಜ್ಯೇಷ್ಠ ಶುಕ್ಲ ಪಕ್ಷ ತ್ರಯೋದಶಿ, ಈ ದಿನವು ‘ಶಿವರಾಜ್ಯಾಭಿಷೇಕ ದಿನ’ವಾಗಿದೆ. ಇಂದಿನ ರಾಜಕಾರಣಿಗಳ ಮಾನಸಿಕತೆಯನ್ನು ನೋಡಿದ ಮೇಲೆ ಶಿವಾಜಿ ಮಹಾರಾಜರಂತಹ ರಾಜರ ಆವಶ್ಯಕತೆ ನಮಗಿದೆಯೆಂದು ನಮ್ಮೆಲ್ಲರ ಗಮನಕ್ಕೆ ಬರುತ್ತದೆ. ಶಿವಾಜಿ ಮಾಹಾರಾಜ ಎಂದರೆ ನಮ್ಮ ರಕ್ಷಕ ! ದೇವರು, ದೇಶ ಮತ್ತು ಧರ್ಮ ಸಂಕಟದಲ್ಲಿರುವಾಗ ಛತ್ರಪತಿ ಶಿವಾಜಿ ಮಹಾರಾಜರ ರೂಪದಲ್ಲಿ ಹಿಂದೂಗಳಿಗೆ ರಕ್ಷಕನು ದೊರಕಿ ಪ್ರಜೆಗಳ (ಜನರ) ದೈನ್ಯತೆಯು ದೂರವಾಗುವುದು : ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಗುವ ಮುಂಚೆ ನಮ್ಮ ಮಾತೆಯರು ಮತ್ತು ಸಹೋದರಿಯರು ಸುರಕ್ಷಿತವಾಗಿರಲಿಲ್ಲ. ಸ್ತ್ರೀಯರ ಮೇಲೆ ಅನೇಕ ಅತ್ಯಾಚಾರಗಳು ಆಗುತ್ತಿದ್ದವು. ಅವರ ರಕ್ಷಣೆಗೆ ಯಾವ ರಕ್ಷಕನೂಇರಲಿಲ್ಲ. ಒತ್ತಾಯಪೂರ್ವಕವಾಗಿ ಹಿಂದೂಗಳ ಧರ್ಮಾಂತರವೂ ನಡೆಯುತ್ತಿತ್ತು. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/697.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👉: t.me/Balasanskara
ವ್ಯಕ್ತಿತ್ವ ವಿಕಸನವಾಗಲು ಸ್ವಭಾವದೋಷ-ನಿರ್ಮೂಲನೆ ಏಕೈಕ ಉಪಾಯ ! ನಮ್ಮ ಪ್ರಗತಿಯಲ್ಲಿ ಅಡಚಣೆಗಳನ್ನು ನಿರ್ಮಿಸುವ ಸ್ವಭಾವದೋಷಗಳ ನಿರ್ಮೂಲನೆಯ ಮಹತ್ವದ ಬಗ್ಗೆ ನಾವು ತಿಳಿದುಕೊಳ್ಳೋಣ. ೧. ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮಹತ್ತ್ವದ್ದಾಗಿರುವುದು ರಾವಣನು ವಿಶ್ರವಾಋಷಿಗಳ ಪುತ್ರನಾಗಿದ್ದನು; ಆದರೆ ಹಿಂದೂ ಧರ್ಮವು ‘ಅವನ ಆದರ್ಶ ತೆಗೆದುಕೊಳ್ಳುವಂತಿಲ್ಲ’ ಎಂದು ಹೇಳಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು’ ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಸ್ವಲ್ಪದರಲ್ಲಿ ಹೇಳಬೇಕೆಂದರೆ ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ, ಎಂಬುದು ಮಹತ್ತ್ವದ್ದಾಗಿದೆ. ಸಂಸ್ಕಾರಗಳಿಂದಲೇ ನಮ್ಮಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು.’ ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/675.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
🌸 ಧರ್ಮವೀರ ಸಂಭಾಜಿ !( ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ 7-06-2025) 🌸 ಧರ್ಮವೀರ ಸಂಭಾಜಿ ಮಹಾರಾಜರು ತಮ್ಮ ಅಲ್ಪಾಯುಷ್ಯವನ್ನು ಧರ್ಮಕ್ಕಾಗಿ ಮುಡಿಪಾಗಿಟ್ಟು, ಹಿಂದೂ ಧರ್ಮವನ್ನು ಔರಂಗಜೇಬನಂತಹ ಕ್ರೂರಿಯಿಂದ ರಕ್ಷಿಸಿ, ವೀರಮರಣ ಹೊಂದಿದ ಧರ್ಮವೀರ!. ನಿರಾಧಾರ ಮತಾಂತರಗೊಂಡವರಿಗೆ ಅಧಾರ ಸಂಭಾಜಿ ಮಹಾರಾಜರು !ಧರ್ಮಕ್ಕಾಗಿ ಬಲಿದಾನ ನೀಡಿ ಇತಿಹಾಸದಲ್ಲಿ ಅಮರರಾದ ಸಂಭಾಜಿ ರಾಜರು!. ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/703.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ದಾನಶೂರ ಕರ್ಣ ಮಕ್ಕಳೇ, ಕರ್ಣನು ದುರ್ಯೋಧನನ ಸ್ನೇಹಿತನಾಗಿದ್ದನು. ಅವನು ಒಬ್ಬ ಶ್ರೇಷ್ಟ ದಾನಿ ಎಂದು ಪ್ರಸಿದ್ಧನಾಗಿದ್ದಾನೆ. ಅವನ ಬಳಿ ಸಹಾಯ ಬೇಡಿ ಬಂದ ಯಾರನ್ನೂ ಅವನು ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಅವನು ಪ್ರತಿದಿನ ನದಿಗೆ ಸ್ನಾನ ಮಾಡಲು ಹೋಗುತ್ತಿದ್ದನು. ನೀರಿನಲ್ಲಿ ಇಳಿದು ಸೂರ್ಯನಿಗೆ ಅರ್ಘ್ಯವನ್ನು ನೀಡುತ್ತಿದ್ದನು ಮತ್ತು ಅವನ ಬಳಿ ಬಂದ ಯಾಚಕರಿಗೆ ಬೇಡಿದನ್ನು ನೀಡುತ್ತಿದ್ದನು. ಪೂರ್ಣ ಲೇಖನ ಓದಲು 👇: https://www.hindujagruti.org/hinduism-for-kids-kannada/55.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👉 : t.me/Balasanskara
🌸 ಪೂ. ಗೊಳವಲಕರ ಗುರೂಜಿಯವರ ಪುಣ್ಯ ಸ್ಮರಣೆ (5-06-2025) 🌸 ಗೊಳವಲಕರ ಮನೆತನ ಮೂಲತಃ ರತ್ನಾಗಿರಿ ಜಿಲ್ಲೆಯ ಸಂಗಮೇಶ್ವರ ತಾಲೂಕಿನ ಗೊಳವಲಿ ಎಂಬ ಊರಿನ ಮನೆತನ. ಈ ಊರಿನ ಪಾಧ್ಯೆ ಮನೆತನದ ಒಂದು ಶಾಖೆ ನಾಗಪೂರಿನಲ್ಲಿ ನೆಲೆಸಿತು ಮತ್ತು ಅವರ ಅಡ್ಡಹೆಸರು ಗೊಳವಲಕರ ಆಯಿತು.ಜ್ಯೇಷ್ಠ ಶುಕ್ಲ ಪಕ್ಷ ಪಂಚಮಿ (೫ ಜೂನ) ೧೯೭೩ರಲ್ಲಿ ಶರೀರವನ್ನು ತ್ಯಜಿಸಿ ಗುರೂಜಿ ಸತ್-ಚಿತ್-ಆನಂದದಲ್ಲಿ ವಿಲೀನರಾದರು. ಪೂ. ಗುರೂಜಿಯ ಚರಣಗಳಲ್ಲಿ ನಮ್ಮ ಕೊಟ್ಯಾವಧಿ ಪ್ರಣಾಮಗಳು ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/688.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👉: t.me/Balasanskara
ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯ ವ್ಯಾಖ್ಯೆಯನ್ನು ತಿಳಿದುಕೊಳ್ಳೋಣ ೧.ವ್ಯಾಖ್ಯೆ ‘ಸ್ವಭಾವದೋಷ-ನಿರ್ಮೂಲನೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸುವುದು. ’ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸಲು ಇರುವ ಪದ್ಧತಿ ಹಾಗೂ ನಿಯಮಿತವಾಗಿ ಅವಲಂಬಿಸಬೇಕಾದ ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ. ೨. ಸ್ವಭಾವದೋಷ - ನಿರ್ಮೂಲನೆಯ ಮಹತ್ತ್ವ ಸುಖಿ ಮತ್ತು ಆದರ್ಶ ಜೀವನವನ್ನು ನಡೆಸಲು ಸಾಧ್ಯವಾಗುವುದು : ಈ ಹಿಂದೆ ಸ್ವಭಾವದೋಷಗಳಿಂದ ಯಾವ ಹಾನಿಗಳಾಗುತ್ತವೆ ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು. ಸ್ವಭಾವದೋಷಗಳಿಂದ ಜೀವನವು ದುಃಖಕರ ಹಾಗೂ ನಿರಾಶಾಜನಕವಾಗುತ್ತದೆ. ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯಿಂದ ದೋಷಗಳ ಮೇಲೆ ನಿಯಂತ್ರಣ ಇಡಲು ಸಾಧ್ಯವಾಗುವುದರಿಂದ ನಮ್ಮಲ್ಲಿ ಗುಣಗಳ ವಿಕಾಸವಾಗುತ್ತದೆ; ಇದರಿಂದ ಜೀವನವು ಸುಖಿ ಮತ್ತು ಆದರ್ಶವಾಗುತ್ತದೆ. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/671.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ರಾಮಾನುಜಾಚಾರ್ಯರ ಪರೀಕ್ಷೆ ರಾಮಾನುಜರು ಶಠಕೋಪ ಸ್ವಾಮಿಗಳ ಶಿಷ್ಯರಾಗಿದ್ದರು. ಸ್ವಾಮಿಗಳು ರಾಮಾನುಜರಿಗೆ ಈಶ್ವರಪ್ರಾಪ್ತಿಯ ರಹಸ್ಯವನ್ನು ಹೇಳಿದ್ದರು ಆದರೆ ಅದನ್ನು ಯಾರಿಗೂ ಹೇಳಬಾರದೆಂದು ತಾಕೀತು ಮಾಡಿದ್ದರು. ಆದರೆ ರಾಮಾನುಜರು ಗುರುಗಳ ಈ ಆಜ್ಞೆಯನ್ನು ಪಾಲಿಸಲಿಲ್ಲ. ಗುರುಗಳು ಯಾವ ಜ್ಞಾನವನ್ನು ಕೊಟ್ಟಿದ್ದರೋ, ಈಶ್ವರ ಪ್ರಾಪ್ತಿಯ ಯಾವ ಮಾರ್ಗವನ್ನು ಹೇಳಿದ್ದರೋ, ಆ ಜ್ಞಾನವನ್ನು ಅವರು ಜನರಿಗೆ ನೀಡಲು ಪ್ರಾರಂಭಿಸಿದರು. ಶಠಕೋಪಸ್ವಾಮಿಗಳಿಗೆ ಈ ಬಗ್ಗೆ ತಿಳಿದಾಗ ಅವರು ಬಹಳ ಕೋಪಗೊಂಡರು. ಅವರು ರಾಮಾನುಜರನ್ನು ಕರೆದು, ’ನನ್ನ ಆಜ್ಞೆಯನ್ನು ಉಲ್ಲಂಘಿಸಿ ನೀನು ಸಾಧನೆಯ ರಹಸ್ಯವನ್ನು ಎಲ್ಲರಿಗೂ ಹೇಳುತ್ತಿರುವೆ, ಇದು ಅಧರ್ಮವಾಗಿದೆ, ಪಾಪವಾಗಿದೆ! ಇದರ ಪರಿಣಾಮ ಏನಾಗುತ್ತದೆ ಎಂಬುದು ನಿನಗೆ ತಿಳಿದಿದೆಯೇ ?’ ಎಂದು ಕೇಳಿದರು. ಪೂರ್ಣ ಲೇಖನ ಓದಿ👇 : https://www.hindujagruti.org/hinduism-for-kids-kannada/717.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👇 : t.me/Balasanskara
ಋಷಿಮುನಿಗಳು ಬರೆದಿಟ್ಟ ಜ್ಞಾನವನ್ನು ಸುಳ್ಳೆಂದು ಸಾಬೀತು ಪಡಿಸಲು ವಿಜ್ಞಾನಕ್ಕೆ ಸಾಧ್ಯವಾಗದಿರುವುದು ‘ಶತಪಥ ಬ್ರಾಹ್ಮಣ’ದಲ್ಲಿ ಸೃಷ್ಟಿಯ ನಿರ್ಮಾಣದ ಬಗ್ಗೆ ವರ್ಣನೆ ಇದೆ. ಎಲ್ಲಕ್ಕಿಂತ ಮೊದಲು ಪ್ರಜಾಪತಿ ಇದ್ದನು. ಅವನು ಪ್ರಕಾಶವನ್ನು ಹೆಚ್ಚಿಸಿದನು. ಅದರಿಂದ ಜಲದ ನಿರ್ಮಿತಿಯಾಯಿತು. ಆದರೆ ಆ ಜಲವೂ ಬಿಸಿಯಾಗತೊಡಗಿತು. ಅದು ಬಾಷ್ಪವಾಗಿ ಅನಂತರ ತಣ್ಣಗಾಗಿ ಅದರಿಂದ ಪರಮಾಣುರೂಪಿ ಮಣ್ಣು ನಿರ್ಮಾಣವಾಯಿತು. ಈ ಪರಮಾಣುಗಳ ಪರಸ್ಪರ ಘರ್ಷಣೆಯಿಂದ ಮರಳಿನ ನಿರ್ಮಾಣವಾಯಿತು ಮತ್ತು ಅದರ ನಂತರ ಅದರಲ್ಲಿನ ಪರಮಾಣುಗಳ ಪರಸ್ಪರ ಆಕರ್ಷಣೆಯಿಂದಾಗಿ ಅದು ಕಲ್ಲಾಯಿತು. ಪೂರ್ಣ ಲೇಖನ ಓದಿ 👇: https://www.hindujagruti.org/hinduism-for-kids-kannada/165.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ 👇: t.me/Balasanskara
🌸 ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಇವರ ಜಯಂತಿ ( 31-05-2025) 🌸 ಮರಾಠರಲ್ಲಿ ಬಹಳಷ್ಟು ಶೂರ ಹೋರಾಟಗಾರು ಹುಟ್ಟಿ ಕುಲದೀಪಕರಾಗಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನರಿಗೆ ’ಅಹಿಲ್ಯಾಬಾಯಿ ಹೋಳ್ಕರ್’ರ ಹೆಸರು ನೆನಪಿದೆ. ಅವರ ಸಮಾಜ ಸೇವೆಯಿಂದ ಅವರಿಗೆ ’ಪುಣ್ಯಶ್ಲೋಕ’ ಎಂಬ ಬಿರುದನ್ನು ನೀಡಲಾಗಿದೆ.ಮಂಕೋಜಿ ಶಿಂದೆ-ಪಾಟೀಲರ ಮಗಳಾದ ಅಹಿಲ್ಯಾಳು ಬಾಲ್ಯದಿಂದಲೇ ಧೈರ್ಯಶಾಲಿಯಾಗಿದ್ದಳು. ಪೂರ್ಣ ಲೇಖನ ಓದಲು👇: https://www.hindujagruti.org/hinduism-for-kids-kannada/663.html ಮಕ್ಕಳಲ್ಲಿ ಸುಸಂಸ್ಕಾರ ನಿರ್ಮಾಣ ಮಾಡುವ 'ಬಾಲಸಂಸ್ಕಾರ'ದ ಟೆಲಿಗ್ರಾಂ ಚಾನೆಲ್ ತಪ್ಪದೆ Subscribe ಮಾಡಿ👉 : t.me/Balasanskara