tgindex

ಆಧ್ಯಾತ್ಮಿಕ ಪ್ರಪಂಚ

Статистика

Spiritual channel in Kannada

Последний пост
15 авг.
Последнее чтение
15 авг.
Постов за неделю
24
Всего постов
49
Тип
открытый
Язык
kn
Категория
Новости и СМИ (по похожим)
В каталоге с
13 авг.
Подписчики
2 086
+1 за 4 дн.
Сутки
+2
+0,10%
Неделя
 
Месяц
 
Просмотров на пост
135
40 постов
Вовлечённость
6,5%
к подписчикам
Постов в день
3,4
всего 49
Упоминаний
1
каналов
Охват размещения
оценка
1/24сутки в ленте
140
1/48двое суток
160
1/72трое суток
173

Оценка по просмотрам недавних постов: пост набирает почти всё за первые сутки.

Посты

  • 🚩🌺🌅🌺🚩 *ಮುಂಜಾನೆಯ ಸೂಳ್ನುಡಿ* *ವೇದಭೂಮಿರಸ್ಮಾಕಂ ಭಾರತಂ ಭಾರತಂ* *ಸರ್ವಜನಸಮೈಕ್ಯ ಭಾವಬಂಧುರಂ ಭಾರತಂ |* *ಸತ್ಯ- ಧರ್ಮ -ಸ್ನೇಹ- ಶಾಂತಿ* *ವಿಶ್ವಭಾವಬಂಧುಭರಿತ ಭಾರತಿಯಾ ವಯಂ ||* *ಸವಿವರ ಅರ್ಥ* *1. ವೇದಭೂಮಿರಸ್ಮಾಕಂ ಭಾರತಂ ಭಾರತಂ* ಅರ್ಥ: ನಮ್ಮ ಭಾರತವು ವೇದಗಳ ಭೂಮಿಯಾಗಿದೆ. ವೇದಗಳೇ ನಮ್ಮ ಸಂಸ್ಕೃತಿಯ ಬೇರು. ಇಲ್ಲಿ "ಭಾರತಂ ಭಾರತಂ" ಎಂದು ಎರಡು ಬಾರಿ ಹೇಳಿದ್ದು ಹೆಮ್ಮೆ ಮತ್ತು ಪ್ರೀತಿಯಿಂದ ಕೂಗಿದಂತೆ. *2. ಸರ್ವಜನಸಮೈಕ್ಯ ಭಾವಬಂಧುರಂ ಭಾರತಂ* ಅರ್ಥ: ಎಲ್ಲಾ ಜನರನ್ನು ಒಗ್ಗೂಡಿಸುವ ಭಾವನೆಗಳಿಂದ ಕಟ್ಟಲ್ಪಟ್ಟ ದೇಶವೇ ಭಾರತ. ಜಾತಿ, ಭಾಷೆ, ಧರ್ಮ, ಪ್ರಾಂತ್ಯ ಭೇದ ಮರೆತು "ನಾವೆಲ್ಲರೂ ಒಂದೇ" ಎಂಬ ಭಾವವೇ ಭಾರತದ ವಿಶೇಷತೆ. *3. ಸತ್ಯ- ಧರ್ಮ -ಸ್ನೇಹ- ಶಾಂತಿ ವಿಶ್ವಭಾವಬಂಧುಭರಿತ ಭಾರತಿಯಾ ವಯಂ* ಅರ್ಥ: ಸತ್ಯ, ಧರ್ಮ, ಸ್ನೇಹ, ಶಾಂತಿ - ಈ ನಾಲ್ಕು ಗುಣಗಳನ್ನು ಹೊಂದಿ, ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ಭಾವಿಸುವ ಭಾರತೀಯರು ನಾವು. "ವಸುಧೈವ ಕುಟುಂಬಕಂ" ಎಂಬ ನಮ್ಮ ಹಳೆಯ ತತ್ವವೇ ಇದು. *ಸಾರಾಂಶ* ಈ ಪದ್ಯದಲ್ಲಿ ಭಾರತವನ್ನು ಕೇವಲ ಒಂದು ದೇಶವಾಗಿ ಅಲ್ಲ, ಒಂದು ಜೀವಂತ ತತ್ವವಾಗಿ ನೋಡಲಾಗಿದೆ. ವೇದಗಳ ಜ್ಞಾನ, ಜನರ ಒಗ್ಗಟ್ಟು, ಮತ್ತು ಮಾನವೀಯ ಮೌಲ್ಯಗಳಾದ ಸತ್ಯ-ಧರ್ಮ-ಸ್ನೇಹ-ಶಾಂತಿ ಮೂಲಕ ಇಡೀ ಪ್ರಪಂಚಕ್ಕೆ ಬೆಳಕಾಗುವ ದೇಶ ನಮ್ಮದು ಎಂಬ ಹೆಮ್ಮೆ ಇದರಲ್ಲಿ ಇದೆ. *🌺ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🌺* *🙏🌺ಶುಭದಿನವಾಗಲಿ🌺🙏*

  • 🚩🔯🌸🌄🇮🇳🌅🌸🔯🚩 🌸🌼ಬೆಳಗಿನ 🌅 ಸೂಳ್ನುಡಿ🌼🌸 ಅತ್ಯಂತ ಪ್ರಾಚೀನವಾದುದೆಂದು ಎಲ್ಲರೂ ಮಾನ್ಯಮಾಡಿರುವ "ಋಗ್ವೇದ"ದಲ್ಲಿಯೇ *ಭಾರತಂ* ಎಂಬ ಶಬ್ದ ಕಂಡುಬರುತ್ತದೆ. *ಓಂ ಯ ಇಮೇ ರೋದಸೀ ಉಭೇ* *ಅಹಮಿಂದ್ರಮತುಷ್ಟವಮ್ |* *ವಿಶ್ವಾಮಿತ್ರಸ್ಯ ರಕ್ಷತಿ* *ಬ್ರಹ್ಮದಂ ಭಾರತಂ ಜನಮ್ ||* (ಋಗ್ವೇದ) ಆಕಾಶ-ಭೂಮಿಗಳ ಮಧ್ಯೆ ಅಂತರಿಕ್ಷದಲ್ಲಿದ್ದ ಇಂದ್ರನನ್ನು ಸ್ತುತಿಸುತ್ತಿದ್ದೇನೆ. ಅವನ ಪ್ರಾರ್ಥನೆಯನ್ನು ಮಾಡಿದ್ದೇನೆ. ವಿಶ್ವಾಮಿತ್ರನ ಬ್ರಹ್ಮರೂಪವಾದ ಉಪಾಸ್ಯದೈವತವು ಭಾರತದ ಜನರನ್ನು ರಕ್ಷಿಸುವುದೆಂದು ಈ ಮಂತ್ರದ ಭಾವಾರ್ಥವು. ಮಹಾತ್ಮರು ದೇವರ ಪ್ರಾರ್ಥನೆಯನ್ನು ಮಾಡಿ ಜನರ ರಕ್ಷಣೆ ಮಾಡುವುದೂ ಸಹ ಈ ಮಂತ್ರದಿಂದ ಸ್ಪಷ್ಟವಾಗುವುದು.‌ *_☆ ಭಾರತ ಶಬ್ದದ ವ್ಯುತ್ಪತ್ತಿ ☆_* *ಭಾಸಿ ವಾ ಭಾಯಾಂ ವಾ ರತಃ ಭಾರತಃ |* ಸ್ವಪ್ರಕಾಶವಾದ ಆತ್ಮರೂಪದಲ್ಲಿ ಆಸಕ್ತನಾಗಿರುವವನೇ "ಭಾರತನು". *ಭಾರೂಪಂ ಪರಂ ಬ್ರಹ್ಮ ತಸ್ಯ ಸ್ವಯಂಪ್ರಕಾಶಾತ್ |* *ತಸ್ಮಿನ್ ಭಾರೂಪೇ ಬ್ರಹ್ಮಣಿ ರತಃ ಸಕ್ತಃ ಭಾರತಃ ||* ಬ್ರಹ್ಮವು ಸ್ವಯಂಪ್ರಕಾಶವಾದುದರಿಂದ ಅದು ಭಾರೂಪವೆನ್ನಿಸಿಕೊಳ್ಳುವುದು. ಅದರಲ್ಲಿಯೇ ಯಾವಾಗಲೂ ಆಸಕ್ತನಾಗಿರುವವನೇ "ಭಾರತ"ನೆಂದು ಹೇಳಲ್ಪಡುವನು. *ಭಾರೂಪ ಅತ್ಮಾ ಸರ್ವಗತಃ* *ತಸ್ಮಿನ್ ಭಾರೂಪೇ ಆತ್ಮನಿ ರತಃ ಭಾರತಃ |* ಸರ್ವವ್ಯಾಪಿಯಾಗಿರುವ ಆತ್ಮತತ್ತ್ವದಲ್ಲಿ ಆಸಕ್ತನಾಗಿರತಕ್ಕವನೇ "ಭಾರತ"ನೆಂದು ಕರೆಯಲ್ಪಡುವನು. *ಭಾ ಬ್ರಹ್ಮವಿದ್ಯಾ, ತಸ್ಯಾಮೇವ ರಮತ ಇತಿ ಭಾರತಃ |* 'ಭಾ' ಎಂದರೆ ಬ್ರಹ್ಮವಿದ್ಯೆಯು. ಆ ಬ್ರಹ್ಮವಿದ್ಯೆಯಲ್ಲಿಯೇ ರಮಿಸತಕ್ಕವನು "ಭಾರತ"ನು. (ಆರ್ಯಸಂಸ್ಕೃತಿ―ಶ್ರೀ ಶ್ರೀಧರ ಸ್ವಾಮಿಗಳು) *🌷🌺🙏🇮🇳 ಶುಭದಿನವಾಗಲಿ! 🇮🇳🙏🌺🌷*

  • ## ಶನಿ ಮತ್ತು ಶಿವನ ಬಗ್ಗೆ ನೀವು ತಿಳಿಯಲೇಬೇಕಾದ ರಹಸ್ಯಗಳು..!! ### ಶನಿ ಮತ್ತು ಶಿವನ ನಡುವಿನ ಸಂಬಂಧ ದಂತಕಥೆಯ ಪ್ರಕಾರ, ಶನಿಯು ಒಮ್ಮೆ ಶಿವನ ವಾಸಸ್ಥಳವಾದ ಕೈಲಾಸ ಪರ್ವತವನ್ನು ತಲುಪಿದನು. ಆಗ ಶಿವನು ಶನಿಯ ಬಳಿ ಬಂದು, ಇಲ್ಲಿಗೆ ಬಂದಿರುವ ಕಾರಣವೇನೆಂದು ಕೇಳಿದನು. ಆಗ ಶನಿ ಹೇಳಿದನು: “ಓ ಸ್ವಾಮಿ, ನಾಳೆಯಿಂದ ನಾನು ನಿಮ್ಮ ರಾಶಿಗೆ ಬರಲಿದ್ದೇನೆ. ಅಂದರೆ ನಿಮ್ಮ ಮೇಲೆ ನನ್ನ ವಕ್ರ ದೃಷ್ಟಿ ಬೀಳಲಿದೆ.” ಶನಿಯ ಈ ಮಾತನ್ನು ಕೇಳಿದ ಶಿವನು ಚಿಂತಿತನಾಗಿ, ಶನಿಯ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವ ಮಾರ್ಗದ ಬಗ್ಗೆ ಯೋಚಿಸಲು ಆರಂಭಿಸಿದನು. ನಂತರ ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಶಿವನು ತನ್ನ ದೇಹದ ಒಂದು ಭಾಗವನ್ನು ಆನೆಯ ರೂಪಕ್ಕೆ ಪರಿವರ್ತಿಸಿಕೊಂಡು ಮೃತ್ಯುಲೋಕಕ್ಕೆ ತೆರಳಿದನು. ಸಂಜೆಯವರೆಗೂ ಆನೆಯ ರೂಪದಲ್ಲಿಯೇ ಇರಬೇಕಾಯಿತು. ಸಂಜೆ ಕಳೆಯುತ್ತಿದ್ದಂತೆ ಶಿವನು ತನ್ನ ಮೇಲಿನ ಶನಿಯ ದೃಷ್ಟಿ ತಪ್ಪಿತು ಎಂದು ಭಾವಿಸಿಕೊಂಡು ಕೈಲಾಸಕ್ಕೆ ಹಿಂದಿರುಗಿದನು. ಕೈಲಾಸ ಪರ್ವತದಲ್ಲಿ ಶನಿಯು ಶಿವನಿಗಾಗಿ ಕಾಯುತ್ತಿರುವುದನ್ನು ಕಂಡ ಶಿವನು ಮುಗುಳ್ನಕ್ಕು, “ನಿಮ್ಮ ದೃಷ್ಟಿ ನನ್ನ ಮೇಲೆ ಬೀಳಲಿಲ್ಲ ನೋಡಿದಿರಾ?” ಎಂದು ಕೇಳಿದನು. ಆಗ ಶನಿಯು ಶಿವನನ್ನು ನೋಡಿ ಮುಗುಳ್ನಕ್ಕು, “ನನ್ನ ವಕ್ರ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” ಎಂದು ಹೇಳಿದನು. ಶಿವನು ಆಶ್ಚರ್ಯಗೊಂಡು ಶನಿಯನ್ನೇ ದಿಟ್ಟಿಸಿ ನೋಡಿದನು. ಆಗ ಶನಿ ಹೇಳಿದನು: “ನೀವಿಷ್ಟು ಸಮಯ ಪ್ರಾಣಿಯ ರೂಪದಲ್ಲಿ ಮೃತ್ಯುಲೋಕದಲ್ಲಿದ್ದದ್ದು ಕೂಡ ನನ್ನ ವಕ್ರ ದೃಷ್ಟಿಯ ಪರಿಣಾಮವೇ.” ಶನಿದೇವನ ನ್ಯಾಯ ಮತ್ತು ಶಕ್ತಿಯನ್ನು ಅರಿತ ಶಿವನು ಸಂತಸಗೊಂಡು ಶನಿಗೆ ಅಪ್ಪುಗೆಯನ್ನು ನೀಡಿದನು. --- ## ಶನಿಯ ಜನ್ಮ ಕಥೆ ದಂತಕಥೆಯ ಪ್ರಕಾರ, ಶನಿದೇವನು ಕಶ್ಯಪ ಋಷಿಯ ಅವಿಭಾವಕತ್ವ ಯಜ್ಞದಿಂದ ಜನಿಸಿದವನು ಎನ್ನುವ ನಂಬಿಕೆಯಿದೆ. ಆದರೆ ಸ್ಕಂದ ಪುರಾಣದ ಕಾಶಿಖಂಡದ ಪ್ರಕಾರ, ಶನಿದೇವನ ತಂದೆ ಸೂರ್ಯದೇವ ಮತ್ತು ತಾಯಿ ಛಾಯಾ. ದಕ್ಷರಾಜನ ಮಗಳಾದ ಸಂಜ್ಞಾ ಸೂರ್ಯನ ಪತ್ನಿಯಾಗಿದ್ದಳು. ಸೂರ್ಯನ ಅತಿಯಾದ ತಾಪವನ್ನು ಸಹಿಸಲಾಗದೆ, ಆಕೆ ತನ್ನದೇ ನೆರಳಿನ ರೂಪವನ್ನು ಸೃಷ್ಟಿಸಿ ಅದಕ್ಕೆ ಛಾಯಾ ಎಂದು ಹೆಸರಿಟ್ಟಳು. ಛಾಯಾಳಿಗೆ ಸೂರ್ಯನ ತಾಪದಿಂದ ಯಾವುದೇ ಸಮಸ್ಯೆ ಇರಲಿಲ್ಲ. ಛಾಯಾ ಮತ್ತು ಸೂರ್ಯದೇವರಿಗೆ ಜನಿಸಿದ ಮಗನೇ ಶನಿ. ಶನಿಯು ಛಾಯಾಳ ಗರ್ಭದಲ್ಲಿದ್ದಾಗ, ಛಾಯಾ ಶಿವನ ಕುರಿತು ಕಠಿಣ ತಪಸ್ಸು ಮಾಡಿದಳು. ಆ ತಪಸ್ಸಿನ ತೀವ್ರತೆಯಿಂದ ಶನಿಯ ಮೈಬಣ್ಣ ಕಪ್ಪಾಯಿತು. ಶನಿಯನ್ನು ನೋಡಿದ ಸೂರ್ಯದೇವನು, “ಇವನು ನನ್ನ ಮಗನಲ್ಲ” ಎಂದು ಛಾಯಾಳ ಮೇಲೆ ಸಂಶಯ ಪಡುತ್ತಾನೆ. --- ## ಶನಿಯ ಸೇಡು ತಾಯಿಗೆ ಮಾಡಿದ ಅವಮಾನದಿಂದ ಕೋಪಗೊಂಡ ಶನಿಯು ತನ್ನ ತಂದೆ ಸೂರ್ಯದೇವನನ್ನು ದಿಟ್ಟಿಸಿ ನೋಡಿದನು. ಶನಿಯ ದೃಷ್ಟಿಯ ಪ್ರಭಾವದಿಂದ ಸೂರ್ಯದೇವನು ಕಪ್ಪಾಗಿ, ಕುಷ್ಠರೋಗಕ್ಕೆ ಒಳಗಾದನು. ತನ್ನ ಸ್ಥಿತಿಯನ್ನು ಕಂಡು ಗಾಬರಿಗೊಂಡ ಸೂರ್ಯದೇವನು ಶಿವನ ಆಶ್ರಯಕ್ಕೆ ತೆರಳಿದನು. ನಂತರ ಶಿವನು ಸೂರ್ಯದೇವನಿಗೆ ಅವನ ತಪ್ಪನ್ನು ಮನವರಿಕೆ ಮಾಡಿಸಿದನು. ಸೂರ್ಯದೇವನು ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು, ಕ್ಷಮೆಯಾಚಿಸಿದನು. ನಂತರ ತನ್ನ ನಿಜವಾದ ರೂಪವನ್ನು ಮರಳಿ ಪಡೆದನು. ಶನಿ ಹುಟ್ಟಿದ ನಂತರವೂ ಸೂರ್ಯದೇವನು ಆತನಿಗೆ ತಂದೆಯ ಪ್ರೀತಿಯನ್ನು ತೋರಿಸಿರಲಿಲ್ಲ. ಇದರಿಂದ ಶನಿಯು ಮತ್ತಷ್ಟು ಕಠಿಣ ತಪಸ್ಸು ಮಾಡಿ ಶಿವನನ್ನು ಸಂತೋಷಪಡಿಸಿದನು. ಶಿವನು ಪ್ರತ್ಯಕ್ಷನಾಗಿ, “ನಿನಗೆ ಯಾವ ವರ ಬೇಕು?” ಎಂದು ಕೇಳಿದನು. ಆಗ ಶನಿ ಹೇಳಿದನು: “ಸೂರ್ಯದೇವನು ನನ್ನ ತಾಯಿಯನ್ನು ಅಗೌರವಿಸಿ ಅವಮಾನಿಸಿದ್ದಾನೆ. ನನ್ನ ತಾಯಿ ಯಾವಾಗಲೂ ಅವಮಾನ ಮತ್ತು ನೋವನ್ನು ಅನುಭವಿಸಿದ್ದಾಳೆ. ಆದ್ದರಿಂದ, ನನಗೆ ಸೂರ್ಯನಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಮತ್ತು ಪೂಜಿಸಲ್ಪಡುವ ವರವನ್ನು ನೀಡು.” ಆಗ ಶಿವನು ಶನಿಗೆ ವರ ನೀಡಿದನು: “ಸಾಮಾನ್ಯ ಮನುಷ್ಯರು, ದೇವತೆಗಳು, ರಾಕ್ಷಸರು, ಸಿದ್ಧರು, ವಿದ್ಯಾಧರರು, ಗಂಧರ್ವರು ಮತ್ತು ಸರ್ಪಗಳು ಕೂಡ ನಿನ್ನ ಹೆಸರಿಗೆ ಹೆದರುತ್ತಾರೆ. ನವಗ್ರಹಗಳಲ್ಲಿ ನೀನು ಅತ್ಯುನ್ನತ ಸ್ಥಾನವನ್ನು ಪಡೆಯುವೆ. ನೀನು ಸರ್ವೋಚ್ಚ ನ್ಯಾಯಾಧೀಶನಾಗುವೆ.” ಹೀಗೆ ಶನಿದೇವನಿಗೆ ನ್ಯಾಯಾಧೀಶನ ಸ್ಥಾನವನ್ನು ನೀಡಿದವನು ಸ್ವತಃ ಮಹಾದೇವ ಶಿವನೇ ಎಂಬುದು ಈ ಪುರಾಣಕಥೆಯ ಸಾರ.

  • ಜಾತಕದಲ್ಲಿ ಶನಿ ಎಂದರೆ ಶಿಸ್ತು ,ಕಠಿಣ ಪರಿಶ್ರಮ ಆಗಿದೆ. ಜಾತಕದ ಯಾವ ಮನೆಯಲ್ಲಿ ಶನಿ ಆಗಬೇಕು ಅಂದರೆ ಶನಿಯ ಶಿಸ್ತು ಪರಿಶ್ರಮ ಪಡಬೇಕು ಗೊತ್ತೆ? ಎಲ್ಲರಿಗೂ ಗೊತ್ತಿರುವಂತೆ ರವಿಯ ಮಗ ಶನಿ ಆಗಿದ್ದಾನೆ. ಇಲ್ಲಿ ಸಂತಾನ ಅಂದರೆ 5 ನೇ ಮನೆ ಆಗಿದೆ. ರವಿಯಿಂದ 5 ನೇ ಮನೆಯು ನಿಮಗೆ ಸಹಕಾರ ಕೊಡಲ್ಲ. ಆ ಮನೆ ವಿಷಯದಲ್ಲಿ ಕಠಿಣ ಪರಿಶ್ರಮ ಪಡಲೇಬೇಕು. *ಅರ್ಥಾತ್ ಜಾತಕದಲ್ಲಿ ರವಿಯಿಂದ 5 ನೇ ಮನೆ ಸಹಕಾರ ಕೊಡಲ್ಲ* 1) ಲಗ್ನದಲ್ಲಿ ರವಿ ಇದ್ದಾಗ 5 ನೇ ಮನೆ creativity tallents ಹೇಳುತ್ತದೆ. ನೀವು ಏನಾದರೂ talents ಪ್ರದರ್ಶಿಸಿದರೆ ಜನರು ಇದು youtube ನಿಂದ ಕದ್ದಿದ್ದು ಸ್ವಂತದ್ದೇನಿಲ್ಲ ಅಂತ ಕಮೆಂಟ್ ಹಾಕುತ್ತಾರೆ. ಹೀಗಾಗಿ ಜಾತಕರು ತಮ್ಮ creativity ವಿಷಯದಲ್ಲಿ ತುಂಬ ಶ್ರಮ ಪಡಬೇಕು. 2)2 ರಲ್ಲಿ ರವಿ ಆಗ 6ನೇಮನೆ - ( ರವಿಯಿಂದ 5 ನೇ ಮನೆ) ಆಫೀಸ್ ನಲ್ಲಿ ಹೊಸದಾಗಿ ಸರಿಯಾದ ಸ್ವಾಗತ ಸಿಗಲ್ಲ, ಬಾಸ್ ವಿಶೇಷ ಕಣ್ಣು ಇಡುತ್ತಾನೆ, ಕಲೀಗ್ ಸಹಕಾರ ಕೊಡಲ್ಲ ನಿಮ್ಮನ್ನು ನೀವು proove ಮಾಡುತ್ತಾ ಹೋಗಬೇಕು. 3) 3 ರಲ್ಲಿ ರವಿ- 7ನೇ ಮನೆ ( ರವಿಯಿಂದ 5 ನೇ ಮನೆ) ಸಂಬಂಧಗಳು ಸ್ವಾತಂತ್ರ್ಯದ ಪಾಠ ಹೇಳುತ್ತವೆ ಅಥವಾ ಕಲಿಸುತ್ತವೆ. ನೀವು ಆಗ ಸಮಸ್ಯೆ ಪರಿಹರಿಸುವವರ ಹತ್ತಿರ ಹೋಗದೇ ಭಾವನಾತ್ಮಕವಾಗಿ strong ಮಾಡುವವರ ಕೂಡ ಮೀಟಿಂಗ್ ಮಾಡುತ್ತೀರಿ. 4)4 ರಲ್ಲಿ ರವಿ- 8 ನೇ ಮನೆ ( ರವಿಯಿಂದ 5 ನೇ ಮನೆ) - ಜೀವನ ದುರ್ಭರ ಎನ್ನಿಸಿದಾಗ ತಲೆ ಮೇಲೆ ಬರ್ಡನ್ ಅನುಭವ ಆಗುತ್ತದೆ. ಜನ ಅನುಕಂಪ ತೋರಿಸುತ್ತಾರೆ ಬಹಳ ಕಡಿಮೆ ಜನ ನಿಮಗೆ ಹಾಗಲಾಗುತ್ತಾರೆ. 5) 5 ರಲ್ಲಿ ರವಿ- 9 ನೇ ಮನೆ ( ರವಿಯಿಂದ 5 ನೇ ಮನೆ) - ಅದೃಷ್ಟ ಸುಲಭವಾಗಿ ಸಿಗಲ್ಲ, ಸರಿಯಾದ ಗುರು ಲೇಟಾಗಿ ಸಿಗುತ್ತಾರೆ Higher Studies ಕಷ್ಟ ಅನ್ನಿಸುತ್ತದೆ. ಯಾರೋ ಹೇಳಿದ್ದನ್ನು ನೀವು ನಂಬಲ್ಲ, ಅನುಭವ ಹೇಳಿದ್ದನ್ನು ನಂಬುತ್ತೀರಿ. 6)6 ರಲ್ಲಿ ರವಿ- 10 ನೇ ಮನೆ ( ರವಿಯಿಂದ 5 ನೇ ಮನೆ) - ಕರಿಯರ್ ಶುರು ಶುರುವಿನಲ್ಲಿ unfair ಅನ್ನಿಸುತ್ತದೆ. ನಿಮ್ಮ ಜೊತೆ ಇರುವವರು Pramotion ಪಡೆಯುತ್ತಾರೆ, ನೋಟಿಸೇಬಲ್ ಆಗುತ್ತಾರೆ. ನೀವು ಮಾತ್ರ proove ಮಾಡುತ್ತಾ ಹೋಗಬೇಕು. 7)7 ರಲ್ಲಿ ರವಿ -11ನೇ ಮನೆ ( ರವಿಯಿಂದ 5 ನೇ ಮನೆ)- ಗೆಳೆಯರು ಸಮಾಜ ನಿಮ್ಮನ್ನು ಬಹು ಬೇಗನೆ ಕನ್ಸಿಡರ್ ಮಾಡಲ್ಲ, ನೀವು ಸಾಧನೆ ಮಾಡಿದ ನಂತರ ಕನ್ಸಿಡರ್ ಮಾಡುತ್ತಾರೆ 8)8 ರಲ್ಲಿ ರವಿ- 12ನೇ ಮನೆ(ರವಿಯಿಂದ 5 ನೇ ಮನೆ)- ನಿಮ್ಮ ಸಂಘರ್ಷದ ಬದುಕನ್ನು ಜಗತ್ತು ಗಮನಿಸಲ್ಲ, ಸಾರ್ವಜನಿಕವಾಗಿ ನಿಮ್ಮ ಗೆಲುವು ನೋಟೀಸ್ ಆಗಲ್ಲ, ಮನಸ್ಸಿನ ಅಂತರಂಗದಲ್ಲಿ ಗೆಲುವು ಪಡಪಡಿಸುತ್ತದೆ. 9)9 ರಲ್ಲಿ ರವಿ-1 ನೇ ಮನೆ ಅಥವಾ ಲಗ್ನ ( ರವಿಯಿಂದ 5 ನೇ ಮನೆ)- ಯಾರೂ ನಿಮ್ಮನ್ನು ಈ ರೀತಿ ಆಗು ಅಂತ ಹುರಿದುಂಬಿಸಲ್ಲ, ನೀವು ಸಲಹೆ ಅನುಸಾರ ವ್ಯಕ್ತಿತ್ವ ರೂಪಿಸಿ ಕೊಳ್ಳುವುದಿಲ್ಲ ಬದಲಾಗಿ mistakes ಮೂಲಕ ವ್ಯಕ್ತಿತ್ವ ರೂಪಿಸಿ ಕೊಳ್ಳುತ್ತೀರಿ 10)10 ರಲ್ಲಿ ರವಿ -2 ನೇ ಮನೆ ( ರವಿಯಿಂದ 5 ನೇ ಮನೆ)- ಕುಟುಂಬದ ಸದಸ್ಯರು ಹಣಕಾಸಿನ ವಿಚಾರದಲ್ಲಿ ಸಹಕಾರ ಕೊಡಲ್ಲ, ನೀವೇ ಸಂಪತ್ತು ಗಳಿಸಬೇಕು 11)11 ರಲ್ಲಿ ರವಿ- 3 ನೇ ಮನೆ ( ರವಿಯಿಂದ 5 ನೇ ಮನೆ)- ನಿಯಮಿತವಾಗಿ ಯಾರೂ ನಿಮ್ಮನ್ನು encourage ಮಾಡಲ್ಲ, ಸೋದರ/ರಿ ಕುಟುಂಬದ ಸದಸ್ಯರೂ Close ಜನರು ಯಾರೂ ನಿಮ್ಮ ಪ್ರಯತ್ನ ಗಮನಿಸಲ್ಲ, ಇನ್ನೊಬ್ಬರ motivation ಇಲ್ಲದೇ ಮುಂದೆ ಸಾಗುತ್ತೀರಿ 12)12 ನೇ ಮನೆ - 4 ನೇ ( ರವಿಯಿಂದ 5 ನೇ ಮನೆ)- ನೀವು ಇರುವ ಮನೆ ನಿಮ್ಮ ನೆಮ್ಮದಿ ತಾಣ ಅನ್ನಿಸಲ್ಲ . ಒಂದು ರೀತಿ ಅಸಹಾಯಕತೆ ಕಾಡುತ್ತದೆ. *ಒಟ್ಟಾರೆ ರವಿಗೆ ಶನಿ ಮಗ ಹೀಗಾಗಿ ರವಿಯಿಂದ ಸಂತಾನ ಹೇಳುವ 5 ನೇ ಮನೆ ವಿಷಯದಲ್ಲಿ ಶನಿ ಆಗಬೇಕು ಅಂದರೆ ಆ ಮನೆ ಕಾರಕತ್ವದಲ್ಲಿ ಕಷ್ಟ ಪಡಬೇಕು* ನಿಮ್ಮ ನಿಮ್ಮ ಜಾತಕದಲ್ಲಿ ರವಿಯಿಂದ 5 ನೇ ಮನೆ ನೋಡಿ

  • ಗಂಡನ ಪಾದ ಪೂಜೆ ಯಾಕೆ ಮಾಡಬೇಕು ಎಂದು ಕೇಳಿದವರಿಗಾಗಿ ಗಂಡನ ಪಾದ ಪೂಜೆ ಎಂದರೆ ಪತಿಯ ಪಾದಗಳನ್ನು ತೊಳೆದು ಪೂಜಿಸುವುದು. ಇದು ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಗಂಡನ ಪಾದ ಪೂಜೆಯ ವಿಧಗಳು ಮತ್ತು ಪ್ರಯೋಜನಗಳು: ವಿಧಿ: ಪಾದ ಪೂಜೆಯನ್ನು ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ದಿನದಂದು ಆಚರಿಸಲಾಗುತ್ತದೆ. ಪತಿಯ ಪಾದಗಳನ್ನು ತೊಳೆದು, ಅರಿಶಿನ, ಕುಂಕುಮ ಹಚ್ಚಿ, ಹೂವುಗಳಿಂದ ಅಲಂಕರಿಸಿ, ಆರತಿ ಮಾಡಿ, ಅಕ್ಷತೆಯನ್ನು ಹಾಕಿ ಆಶೀರ್ವಾದ ಪಡೆಯುತ್ತಾರೆ. ದೃಷ್ಟಿ ತೆಗೆದು ಸಿಹಿಯನ್ನು ತಿನ್ನಿಸಲಾಗುತ್ತದೆ. ಪ್ರಯೋಜನಗಳು: ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ಮತ್ತು ಪ್ರೀತಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಗಂಡನ ಆಶೀರ್ವಾದ ಸಿಗುತ್ತದೆ ಮತ್ತು ದಾಂಪತ್ಯ ಜೀವನದ ಮೇಲೆ ದೇವರ ಆಶೀರ್ವಾದ ಬರುತ್ತದೆ. ವ್ಯಾಪಾರದಲ್ಲಿ ಶತ್ರುಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ವೃತ್ತಿ ಮತ್ತು ಶಿಕ್ಷಣದಲ್ಲಿ ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಭಾವನಾತ್ಮಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗರ್ಭಧಾರಣೆ, ಹೆರಿಗೆ ಮತ್ತು IVF ಯಶಸ್ಸಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ದೀಕ್ಷೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಜಾತಕದಲ್ಲಿನ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಭೀಮನ ಅಮಾವಾಸ್ಯೆ ಗೆ ಸೀಮಿತ ಅಲ್ಲ ವಿಶೇಷ ದಿನಗಳಲ್ಲಿ ಮಾಡಬಹುದು ▬▬▬ஜ۩۞۩ஜ▬▬▬*▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು ಸರ್ವಜನಾಃ ಸುಖಿನೋಭವತು *ಶುಭಂ ಭವತು. ಸುಖಿನೋ ಭವಂತು* ಶ್ರೀಮತಿ ನಿರ್ಮಲರಾಜೇಶ್ ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

  • 🚩🔯🌸🌄⚛🌅🌸🔯🚩 🌸🌼ಬೆಳಗಿನ 🌅 ಸೂಳ್ನುಡಿ🌼🌸 *ಆದರೇಣ ಯಥಾಸ್ತೌತಿ* *ಧನವಂತಂ ಧನೇಚ್ಛಯಾ |* *ತಥಾ ಚೇದ್ವಿಶ್ವಕರ್ತಾರಂ* *ಕೋನ ಮುಚ್ಯೇತ ಬಂಧನಾತ್ ||* _ಧನಾಪೇಕ್ಷೆಯಿಂದ ಸಾಹುಕಾರರನ್ನು ಹೇಗೆ ಪರಮಾದರದಿಂದ ಜನರು ಕೊಂಡಾಡುತ್ತಾರೋ, ಹಾಗೆಯೇ ಈ ವಿಶ್ವದ ಸೃಷ್ಟಿಕರ್ತನನ್ನು ಕೊಂಡಾಡಿದ್ದೇ ಆದರೆ ಯಾರು ತಾನೇ ಜನನಮರಣಗಳ ಬಂಧನದಿಂದ ಪಾರಾಗುವುದಿಲ್ಲ?_ ಲೋಕದಲ್ಲಿ ಧನ, ಪದವಿ ಅಥವಾ ಇತರ ಲೌಕಿಕ ಪ್ರಯೋಜನಗಳನ್ನು ಪಡೆಯಲು ಜನರು ಧನವಂತರನ್ನಾಗಲಿ, ಅಧಿಕಾರಿಗಳನ್ನಾಗಲಿ ಅತ್ಯಂತ ವಿನಯದಿಂದ, ಗೌರವದಿಂದ ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ ಅಂತಹ ಪ್ರಯತ್ನವು ಕೇವಲ ತಾತ್ಕಾಲಿಕ ಲಾಭಗಳಿಗಾಗಿಯೇ ಸೀಮಿತವಾಗಿರುತ್ತದೆ. ಆದರೆ ಇದೇ ಆದರಭಾವದಿಂದ, ಇದೇ ಭಕ್ತಿಯಿಂದ, ಇದೇ ನಿಷ್ಠೆಯಿಂದ ಈ ಜಗತ್ತಿನ ಸೃಷ್ಟಿಕರ್ತನಾದ ಪರಮೇಶ್ವರನನ್ನು ಸ್ಮರಿಸಿ, ಸ್ತುತಿಸಿ, ಉಪಾಸನೆ ಮಾಡಿದರೆ, ಅವರ ಅನುಗ್ರಹದಿಂದ ಸಂಸಾರಬಂಧನಗಳಿಂದ ಮುಕ್ತಿ ದೊರೆಯುತ್ತದೆ. ಭಗವದ್ಭಕ್ತಿಯೇ ಮೋಕ್ಷಕ್ಕೆ ನೇರವಾದ ಮಾರ್ಗವೆಂದು ಈ ಸುಭಾಷಿತವು ಬೋಧಿಸುತ್ತದೆ. ಆದ್ದರಿಂದ ನಶ್ವರವಾದ ಭೌತಿಕ ಸಂಪತ್ತಿಗಾಗಿ ತೋರುವ ಆಸಕ್ತಿ ಮತ್ತು ಶ್ರದ್ಧೆಗಿಂತ, ಶಾಶ್ವತವಾದ ಪರಮಪದವನ್ನು ಅನುಗ್ರಹಿಸುವ ಭಗವಂತನ ಮೇಲೆಯೇ ಇನ್ನಷ್ಟು ಭಕ್ತಿ, ವಿಶ್ವಾಸ ಮತ್ತು ಆರಾಧನೆಯನ್ನು ಬೆಳೆಸಿಕೊಳ್ಳಬೇಕೆಂದು ಈ ಸುಭಾಷಿತವು ನಮಗೆ ಉಪದೇಶಿಸುತ್ತದೆ. *🌷🌺🙏 ☆ ಶುಭದಿನವಾಗಲಿ! ☆ 🙏🌺🌷*

  • 🚩🌺🌅🌺🚩 *ಮುಂಜಾನೆಯ ಸೂಳ್ನುಡಿ* ಬ್ರಹ್ಮೋಪಾಸನೆಯಂತೆ ಬ್ರಹ್ಮಸಾಕ್ಷಾತ್ಕಾರವೂ ಆಪ್ತನ ಉಪದೇಶದಿಂದ ಸಿದ್ಧಿಸದೊ - ಎಂಬ ಸಂಶಯಕ್ಕೆ ಪರಿಹಾರವನ್ನು ಹೇಳುತ್ತಾರೆ : *ಬ್ರಹ್ಮಸಾಕ್ಷಾತ್ಕೃತಿಸ್ತ್ವೇವಂ ವಿಚಾರೇಣ ವಿನಾ ನೃಣಾಂ |* *ಆಪ್ತೋಪದೇಶಮಾತ್ರೇಣ ನ ಸಂಭವತಿ ಕುತ್ರಚಿತ್ ||* ಮನುಷ್ಯರಿಗೆ ಅಪರೋಕ್ಷಜ್ಞಾನವು (ತತ್ - ತ್ವಂ ಪದಾರ್ಥಗಳ) ವಿಚಾರದ ಹೊರತು ಗುರುವಿನ ಉಪದೇಶ ಮಾತ್ರದಿಂದ ಎಲ್ಲಿಯೂ ಸಂಭವಿಸದು. { ಗುರುವಿನ ಉಪದೇಶದಿಂದ ಉಪಾಸನೆಯ ಅನುಷ್ಠಾನವು ಉಂಟಾಗುವಂತೆ ಬ್ರಹ್ಮ ಸಾಕ್ಷಾತ್ಕಾರವನ್ನು ಹೊಂದುವುದು ಸಾಧ್ಯವಲ್ಲ. ಗುರುವಿನ ಉಪದೇಶದೊಂದಿಗೆ ಸ್ವ - ವಿಚಾರವೂ ಬೇಕು ಎಂಬ ಅಭಿಪ್ರಾಯ.} *(ಧ್ಯಾನದೀಪ ಪ್ರಕರಣ)* ಮುಂದುವರಿಯುತ್ತದೆ.. ಈ ಶ್ಲೋಕದ ಪ್ರಶ್ನೆ ಏನು ಅಂತ ಮೊದಲು ಅರ್ಥ ಮಾಡಿಕೊಳ್ಳೋಣ. ಸಂಶಯ: "ಗುರು ಒಮ್ಮೆ ಉಪದೇಶ ಮಾಡಿದರೆ ಸಾಕಲ್ಲವೇ? ಅದರಿಂದಲೇ ಬ್ರಹ್ಮಸಾಕ್ಷಾತ್ಕಾರ ಆಗಬಾರದೇ?" ಅದಕ್ಕೆ ಉತ್ತರ: *ಇಲ್ಲ, ಆಗುವುದಿಲ್ಲ.* 1. *ಯಾಕೆ ಉಪದೇಶ ಮಾತ್ರ ಸಾಲದು?* ಗುರು ಹೇಳುವುದು ಮಾತು. ಅದು _ಪರೋಕ್ಷ ಜ್ಞಾನ_. ಉದಾ: ಯಾರೋ "ಜೇನು ಸಿಹಿ" ಅಂತ ಹೇಳಿದರು. ನೀವು ಕೇಳಿದ್ದೀರಿ. ಆದರೆ ನಾಲಿಗೆಗೆ ರುಚಿ ನೋಡಿದ ಅನುಭವ ಆಗಿದೆಯೇ? ಇಲ್ಲ. ಅದೇ ರೀತಿ "ನೀನೇ ಬ್ರಹ್ಮ" ಅಂತ ಗುರು ಹೇಳಬಹುದು. ಆದರೆ "ಹೌದು, ನಾನೇ ಅದು" ಅಂತ ನಿಮಗೆ ಒಳಗಿಂದ ಅನುಭವ ಆಗಬೇಕಲ್ಲ. ಆ ಅನುಭವಕ್ಕೆ ವಿಚಾರ ಬೇಕು. 2. *ವಿಚಾರ ಅಂದರೆ ಏನು?* ಇಲ್ಲಿ "ವಿಚಾರ" ಅಂದರೆ ಸುಮ್ಮನೆ ಯೋಚನೆ ಅಲ್ಲ. ವೇದಾಂತದಲ್ಲಿ ಇದು 3 ಹಂತ: - *ಶ್ರವಣ*: ಗುರುವಿನಿಂದ ತತ್-ತ್ವಂ ಪದಾರ್ಥವನ್ನು ಕೇಳುವುದು. "ತ್" = ಬ್ರಹ್ಮ, "ತ್ವಂ" = ನೀನು - *ಮನ*: ಕೇಳಿದ್ದನ್ನ ತರ್ಕದಿಂದ, ಯುಕ್ತಿಯಿಂದ ಪದೇ ಪದೇ ಆಲೋಚಿಸುವುದು. ಸಂಶಯಗಳನ್ನು ಕಳೆಯುವುದು - *ನಿದಿಧ್ಯಾಸನ*: ಅದನ್ನೇ ಧ್ಯಾನದಲ್ಲಿ ಆಳವಾಗಿ ಸ್ಥಿರಪಡಿಸುವುದು ಈ ಮೂರರ ಒಟ್ಟಿಗೆ _ವಿಚಾರ_ ಹೇಳುತ್ತಾರೆ. ಇದು ಇಲ್ಲದೆ ಸಾಕ್ಷಾತ್ಕಾರ ಸಾಧ್ಯವೇ ಇಲ್ಲ ಎಂದು ಈ ಶ್ಲೋಕ ಹೇಳುತ್ತದೆ. 3. *ಉಪಾಸನೆಗೂ ಸಾಕ್ಷಾತ್ಕಾರಕ್ಕೂ ವ್ಯತ್ಯಾಸ* 4. ಟಿಪ್ಪಣಿಯಲ್ಲಿ ಬಹಳ ಮುಖ್ಯವಾದ ಮಾತಿದೆ: "ಗುರುವಿನ ಉಪದೇಶದಿಂದ ಉಪಾಸನೆಯ ಅನುಷ್ಠಾನ ಉಂಟಾಗುತ್ತದೆ. ಆದರೆ ಬ್ರಹ್ಮ ಸಾಕ್ಷಾತ್ಕಾರಕ್ಕೆ ಸ್ವ-ವಿಚಾರ ಬೇಕು" ಉಪಾಸನೆ = ಭಕ್ತಿ, ಪೂಜೆ, ಜಪ. ಇದಕ್ಕೆ ಗುರುವಿನ ಮಾರ್ಗದರ್ಶನ ಸಾಕು. ಸಾಕ್ಷಾತ್ಕಾರ = "ನಾನು ದೇಹವಲ್ಲ, ಮನಸ್ಸಲ್ಲ, ನಾನು ಸಚ್ಚಿದಾನಂದ ಸ್ವರೂಪ" ಎಂಬ ನೇರ ಅನುಭವ. ಇದಕ್ಕೆ ನೀವೇ ನಿಮ್ಮ ಒಳಗೆ ಪ್ರಶ್ನೆ ಹಾಕಬೇಕು: *"ನಾನು ಯಾರು?"* ಆದ್ದರಿಂದಲೇ ಆಚಾರ್ಯರು ಹೇಳುತ್ತಾರೆ: ಗುರು ಬೆಂಕಿ ಹಚ್ಚಬಹುದು, ಆದರೆ ಅಡುಗೆ ನೀವೇ ಮಾಡಬೇಕು. ಸಂಕ್ಷಿಪ್ತವಾಗಿ: *ಉಪದೇಶ = ಬೀಜ, ವಿಚಾರ = ನೀರು ಮತ್ತು ಗೊಬ್ಬರ, ಸಾಕ್ಷಾತ್ಕಾರ = ಫಲ* ಎಂಬ ಭಾವ. *🙏🌺ಶುಭದಿನವಾಗಲಿ🌺🙏*

  • ನೀವು ಆಡುವ ಮಾತುಗಳ ಆಧಾರದ ಮೇಲೆ ಜನ ನಿಮ್ಮನ್ನು ಎಂಥವರು ಅಂತ ಹಣೆಪಟ್ಟಿ ಕಟ್ಟುತ್ತಾರೆ. ಈ ಸಂವಹನ ಅಥವಾ communication ಅಥವಾ ಮಾತನಾಡುವ ಶೈಲಿ ಅಂದಾಗ ಜ್ಯೋತಿಷ್ಯದ ಅನುಸಾರ ಹೇಗೆ ಅಂತ ತಿಳಿಯೋಣ. ಪ್ರಥಮವಾಗಿ speech, communication ಅಂದಾಗ ಬುಧನನ್ನು ನೋಡಬೇಕು. ಬುಧ speech logic ಬುದ್ಧಿವಂತಿಕೆ ಹೇಳುತ್ತಾನೆ. ಈ ಬುಧನ ಸ್ಥಾನವು ವ್ಯಕ್ತಿಯು ಮಾತನಾಡುವ ರೀತಿ ಹೇಳುತ್ತದೆ. 3 ನೇ ಮನೆ expression ಮನೆ, ಬರವಣಿಗೆ & siblings ಹೇಳುತ್ತದೆ. Strong 3ನೇ ಮನೆ ಇದ್ದಾಗ ವ್ಯಕ್ತಿ ದಿಟ್ಟ ಅಭಿವ್ಯಕ್ತಿ ಹೊಂದಿರುತ್ತಾನೆ. 3 ನೇ ಮನೆ ರಾಶಿ ನೋಡಬೇಕು ಇದು ಸಂವಹನದ flavour ಹೇಳುತ್ತದೆ ಅಗ್ನಿ ತತ್ವ ರಾಶಿ ಇದ್ದಾಗ ದಿಟ್ಟ , ಜಲ ತತ್ವ ಭಾವನಾಶೀಲ , ವಾಯು ತತ್ವ ಹಾಸ್ಯ ರೀತಿ ಭೂ ತತ್ವ ರಾಶಿ practical ಮಾತುಗಾರಿಕೆ ಇರುತ್ತದೆ. ಬುಧನ ಮೇಲಿನ ದೃಷ್ಟಿ ಇದೂ ಸಹ ಸಂವಹನದ ಶೈಲಿ ಮೇಲೆ ಪ್ರಭಾವ ಬೀರುತ್ತದೆ. ಶನಿ ದೃಷ್ಟಿ ಇದ್ದಾಗ ನಿಧಾನ cautious ಆಗಿ ಮಂಗಳ ದೃಷ್ಟಿ ಇದ್ದಾಗ ದೃಢವಾದ ಚಂದ್ರನ ದೃಷ್ಟಿ ಇದ್ದಾಗ intuitive ಆಗಿ ಗುರು ದೃಷ್ಟಿ ಇದ್ದಾಗ ಜ್ಞಾನ ಸಹಿತ ಮಾತು. ಬುಧ ಇರುವ ರಾಶಿ ಮಾತಿನ ವ್ಯಕ್ತಿತ್ವ & tone ಹೇಳುತ್ತದೆ ಮಿಥುನ ರಾಶಿಯಲ್ಲಿ ಬುಧ ಇದ್ದಾಗ playful & smart, ಕನ್ಯಾ ದಲ್ಲಿ ಇದ್ದಾಗ precise, ವೃಶ್ಚಿಕ ಗುಪ್ತ ಗುಪ್ತ , ಸಿಂಹ expressive ಆಗಿ ಮಾತುಗಾರಿಕೆ. ಬುಧನ ನಕ್ಷತ್ರವು speech ನ ಸೂಕ್ಷ್ಮತೆ ಇರುತ್ತದೆ. ಆಶ್ಲೇಷ ಮನವೊಲಿಸುವ ರೀತಿ ರೋಹಿಣಿ pleasant ಜ್ಯೇಷ್ಠ sharp ಆಗಿ ಮಾತನಾಡುತ್ತಾರೆ. ಲಗ್ನ ಇರುವ ರಾಶಿ ಬಾಹ್ಯ ವ್ಯಕ್ತಿತ್ವ & first impression ಹೇಳುತ್ತದೆ. ಇದು body language ಮೇಲೆ ಪ್ರಭಾವ ಬೀರುತ್ತದೆ ಹಾಗೂ ಮಾತಿನ start ಹೇಗೆ ಅಂತ ಹೇಳುತ್ತದೆ. ವಕ್ರೀ ಬುಧ ಆಂತರಿಕವಾಗಿ ಚಿಂತಿಸಿ ಮಾತುಕತೆ ಒಟ್ಟಾರೆ ಇವರು ತಡ rethinking deep analysis ಆಗಿ ಮಾತುಕತೆ. ಚಂದ್ರನ ಸ್ಥಾನವು ಭಾವನಾತ್ಮಕ ಬುದ್ಧಿವಂತಿಕೆ ಸಹಿತ ಮಾತುಗಾರಿಕೆ ಹೇಳುತ್ತದೆ. ಇದು ಸಂವಹನಕ್ಕೆ softness sensitivity ಕೊಡುತ್ತದೆ. ದಶ ಕಾಲ ಈಗ ನಡೆದಿರುವ ದಶಾ ಕಾಲವು ಬುಧನ ಮೇಲೆ ಪ್ರಭಾವ ಬೀರಿದಾಗ ಅದು ಉತ್ತಮ ರೀತಿಯ ಮಾತುಗಾರಿಕೆ ಅಥವಾ ಕೆಟ್ಟ ರೀತಿಯ ಮಾತುಗಾರಿಕೆ ಹೇಳುತ್ತದೆ.

  • ಜಾತಕದಲ್ಲಿ ಗ್ರಹ- actor, ರಾಶಿ- costumes/ಪಾತ್ರ ಭಾವ/ಮನೆ- area ಅಂತ ಹೇಳಬಹುದು. ಗ್ರಹಗಳಲ್ಲಿ ಸ್ವಗ್ರಹಿಯಾಗಿ ಯಾವುದು ಶ್ರೇಷ್ಠ? ಅಂದಾಗ ಅದಕ್ಕೆ ಉತ್ತರ *ಬುಧ* ಆಗಿದ್ದಾನೆ. ತನ್ನ ಸ್ವಂತ ಮನೆ ಅಂದರೆ ಕನ್ಯಾ ರಾಶಿಯಲ್ಲಿ ಬುಧ ಸ್ವಗ್ರಹಿ+ ಉಚ್ಛ ಆಗುತ್ತಾನೆ. ಇನ್ನು ಕನ್ಯಾ ಲಗ್ನವಾಗಿ ಲಗ್ನದಲ್ಲಿ ಬುಧ ಇದ್ದಾಗ ಸ್ವಗ್ರಹಿ+ ಉಚ್ಛ+ ದಿಗ್ಬಲ ಮೂರು ಆಗುತ್ತಾನೆ ಅಂದರೆ *super strong* ಆಗುತ್ತಾನೆ. ಗ್ರಹಗಳ strength ನ್ನು ರಾಶಿ ಅನುಸಾರ ನೋಡುವ ಕ್ರಮ 1) ಉಚ್ಛ- strongest 2) ಸ್ವಗೃಹಿ -strong 3) ಮೂಲ ತ್ರಿಕೋನ- strong, 4) ಮಿತ್ರ ರಾಶಿ- good 5) ತಟಸ್ಥ ರಾಶಿ- not bad 6) ವೈರಿ ಮನೆ- weak 7) ನೀಚ- weakest. ಎಲ್ಲ ಐಷಾರಾಮಿ ಅನುಕೂಲ ಇರುವ ಭವ್ಯ ಬಂಗಲೆ ಇರುವುದು ಹಾಗೆನೇ ಎಲ್ಲ ಫೆಸಿಲಿಟಿ ಇರುವ flat ಇರುವುದು. ಜಾತಕದಲ್ಲಿ ಗ್ರಹ ಉಚ್ಛ ಇದ್ದಾಗ ಐಷಾರಾಮಿ ಸವಲತ್ತು comfort ಕೊಟ್ಟರೆ ಅದೇ ಗ್ರಹ ಕೇವಲ strong ಇದ್ದಾಗ ಎಲ್ಲ ಫೆಸಿಲಿಟಿ ಇರುವ flat ದಯಪಾಲಿಸುತ್ತಾನೆ. ಇನ್ನು ಜಾತಕದಲ್ಲಿ functional benefic ಗ್ರಹಗಳು & ಯೋಗ ಕಾರಕ ಗ್ರಹಗಳು strong ಇದ್ದಾಗ ತಮ್ಮ ದಶ/ಅಂತರ ದಶದಲ್ಲಿ ಒಳ್ಳೆಯ ಫಲ ಕೊಡುತ್ತವೆ. ಜಾತಕದಲ್ಲಿ 6&12 ರ ಅಧಿಪತಿಗಳು strongest ಅಂದರೆ ಉಚ್ಛ ಇದ್ದಾಗ ಅವು ಜಾತಕರಿಗೆ ದೊಡ್ಡ ಶತೃ ಪಡೆ ದಯಪಾಲಿಸಿ ರಸ್ತೆಗೆ ತರುತ್ತವೆ.

  • Photo from Srikanth Matrubai

  • 🚩🌺🌅🌺🚩 *ಮುಂಜಾನೆಯ ಸೂಳ್ನುಡಿ* ಹಾಗಾದರೆ ಈಗಿನ ಜನರು ವೇದವಾಕ್ಯ ವಿಚಾರವನ್ನು ಏಕೆ ಮಾಡುತ್ತಾರೆ ? ಎಂಬುದಕ್ಕೆ ಉತ್ತರಿಸುತ್ತಾರೆ : *ವೇದವಾಕ್ಯಾದಿ ನಿರ್ಣೇತುಮಿಚ್ಛನ್ ಮೀಮಾಂಸತಾಂ |* *ಆಪ್ತೋಪದೇಶಮಾತ್ರೇಣ ಹ್ಯನುಷ್ಠಾನಂ ಹಿ ಸಂಭವೇತ್ ||* ಈಗಿನ ಜನರು ವೇದವಾಕ್ಯಗಳ ಅರ್ಥವನ್ನು ನಿರ್ಣಯಿಸುವುದಕ್ಕಾಗಿ ವಿಚಾರವನ್ನು ಮಾಡಲಿ;1 ಆದರೆ ಗುರುವಿನ ಉಪದೇಶದಿಂದಲೇ ಉಪಾಸನೆಯ ಅನುಷ್ಠಾನವು ಸಿದ್ಧಿಸುತ್ತದೆ. {1, ಇವರು ಉಪಾಸನೆಯ ಸಿದ್ಧಿಗಾಗಿ ವಿಚಾರಮಾಡುವುದಿಲ್ಲ.} *(ಧ್ಯಾನದೀಪ ಪ್ರಕರಣ)* ಮುಂದುವರಿಯುತ್ತದೆ.. *ಪದಚ್ಛೇದ* 1. ವೇದವಾಕ್ಯ + ಆದಿ = ವೇದವಾಕ್ಯಗಳು ಮತ್ತು ಅದರ ಅಂಗಗಳು 2. ನಿರ್ಣೇತುಂ + ಇಚ್ಛನ್ = ನಿರ್ಣಯ ಮಾಡಲು ಇಚ್ಛಿಸುವವನು 3. ಮೀಮಾಂಸತಾಂ = ಮೀಮಾಂಸೆ ಮಾಡಲಿ, ವಿಚಾರ ಮಾಡಲಿ 4. ಆಪ್ತ + ಉಪದೇಶ + ಮಾತ್ರೇಣ = ಆಪ್ತನ ಉಪದೇಶದಿಂದ ಮಾತ್ರ 5. ಹಿ = ಏಕೆಂದರೆ 6. ಅನುಷ್ಠಾನಂ = ಆಚರಣೆ, ಉಪಾಸನೆ 7. ಸಂಭವೇತ್ = ಸಾಧ್ಯವಾಗುತ್ತದೆ *ಸವಿಸ್ತಾರ ವ್ಯಾಖ್ಯಾನ* *ಅನ್ವಯ:* ಯಃ ಜನಃ ವೇದವಾಕ್ಯಾದೀನಾಂ ಅರ್ಥಂ ನಿರ್ಣೇತುಂ ಇಚ್ಛತಿ, ಸಃ ಮೀಮಾಂಸಾಂ ಕುರ್ಯಾತ್. ಕಿಂತು ಉಪಾಸನಾಯಾಃ ಅನುಷ್ಠಾನಂ ತು ಆಪ್ತಸ್ಯ ಗುರುಃ ಯಃ ಉಪದಿಶತಿ ತೇನ ಏವ ಭವತಿ. *ತಾತ್ಪರ್ಯ:* ವೇದವಾಕ್ಯಗಳ ಮತ್ತು ಅವುಗಳ ಅಂಗಗಳಾದ ಬ್ರಾಹ್ಮಣ, ಆರಣ್ಯಕ, ಉಪನಿಷತ್ತುಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳುವ ಇಚ್ಛೆ ಇರುವವನು ಪೂರ್ವಮೀಮಾಂಸಾ ಮತ್ತು ಉತ್ತರಮೀಮಾಂಸಾ ಶಾಸ್ತ್ರದ ಪ್ರಕಾರ ತರ್ಕ, ವಿಚಾರ, ಪ್ರಮಾಣಗಳಿಂದ ನಿರ್ಣಯ ಮಾಡಬೇಕು. ಆದರೆ ಕೇವಲ ಬೌದ್ಧಿಕವಾದ ನಿರ್ಣಯದಿಂದ ಉಪಾಸನಾ ಕರ್ಮದ ಅನುಷ್ಠಾನವು ಸಿದ್ಧಿಸುವುದಿಲ್ಲ. ಅನುಷ್ಠಾನಕ್ಕೆ ಆಪ್ತಃ ಅಂದರೆ ಕಾಮ-ಕ್ರೋಧಾದಿಗಳಿಂದ ಮುಕ್ತನಾದ, ಶಾಸ್ತ್ರಜ್ಞನಾದ, ಸ್ವಾನುಭವವುಳ್ಳ ಗುರುವಿನ ಉಪದೇಶವೇ ಕಾರಣವಾಗಿದೆ. *ಸ್ಪಷ್ಟಾರ್ಥ* *1. ಮೀಮಾಂಸೆ ಯಾಕೆ ಬೇಕು?* ವೇದವಾಕ್ಯಗಳು ಸಾಮಾನ್ಯ ಭಾಷೆಯಲ್ಲಿಲ್ಲ. ಅದರಲ್ಲಿ ಶಬ್ದಶಕ್ತಿ, ಲಕ್ಷಣ, ವ್ಯಂಜನೆ ಇರುತ್ತದೆ. ಒಂದು ವಾಕ್ಯಕ್ಕೆ ಅನೇಕ ಅರ್ಥ ಬರಬಹುದು. ಆದ್ದರಿಂದ "ಇದರ ನಿಜವಾದ ತಾತ್ಪರ್ಯವೇನು" ಎಂದು ನಿರ್ಣಯಿಸಲು ಶಾಸ್ತ್ರೀಯ ವಿಚಾರ ಅಗತ್ಯ. ಇದಕ್ಕೆ ಹೆಸರೇ ಮೀಮಾಂಸೆ. ಇದರಿಂದ ಸಂಶಯ, ವಿಪರೀತ ಭಾವನೆಗಳು ಹೋಗುತ್ತವೆ. *2. ಆಪ್ತೋಪದೇಶವೇ ಯಾಕೆ ಬೇಕು?* ಜ್ಞಾನದಿಂದ ಕರ್ಮ ಬರುವುದಿಲ್ಲ. "ಅಗ್ನಿಹೋತ್ರ ಮಾಡು" ಎಂದು ತಿಳಿದುಕೊಂಡರೂ, ಅದನ್ನು ಯಾವ ಮಂತ್ರದಿಂದ, ಯಾವ ಕಾಲದಲ್ಲಿ, ಯಾವ ವಿಧಿಯಿಂದ ಮಾಡುವುದು ಎಂದು ಪ್ರತ್ಯಕ್ಷವಾಗಿ ಕಲಿಸಿಕೊಡುವವನು ಬೇಕು. ಅಂತಹವನೇ ಆಪ್ತ. (ಅಂದರೆ ಗುರು). ಆಪ್ತನ ಲಕ್ಷಣ: _ಶ್ರೋತ್ರಿಯಃ ಬ್ರಹ್ಮನಿಷ್ಠಃ_ - ವೇದವನ್ನು ಚೆನ್ನಾಗಿ ಅಧ್ಯಯನ ಮಾಡಿದವನು ಮತ್ತು ಅದನ್ನು ತನ್ನ ಜೀವನದಲ್ಲಿ ಸಾಕ್ಷಾತ್ತಾಗಿ ಅಳವಡಿಸಿಕೊಂಡವನು. *3. ಈ ಶ್ಲೋಕದ ಮುಖ್ಯ ಸಿದ್ಧಾಂತ* ಜ್ಞಾನ ಮತ್ತು ಕ್ರಿಯೆ ಎರಡು ಬೇರೆ ಬೇರೆ. ಜ್ಞಾನಕ್ಕೆ ಮೀಮಾಂಸೆಯೇ ಸಾಧನ. ಕ್ರಿಯೆಗೆ ಆಪ್ತೋಪದೇಶವೆ ಸಾಧನ. ಒಂದನ್ನು ಬಿಟ್ಟು ಇನ್ನೊಂದು ಅಪೂರ್ಣ. {ಇವರು ಉಪಾಸನೆಯ ಸಿದ್ಧಿಗಾಗಿ ವಿಚಾರಮಾಡುವುದಿಲ್ಲ}_ ಇದರ ಅರ್ಥ: ಇಂದಿನ ಜನರು ಕೇವಲ ವಾದಕ್ಕೆ ಮಾತ್ರ ಮೀಮಾಂಸೆ ಮಾಡುತ್ತಾರೆ. ಆದರೆ ಆ ತಿಳಿದ ಅರ್ಥವನ್ನು ತನ್ನಲ್ಲಿ ಇಳಿಸಿಕೊಳ್ಳಲು, ಸರಿಯಾದ ದಾರಿಯಲ್ಲಿ ಆಚರಿಸಲು ವಿಚಾರ ಮಾಡುವುದಿಲ್ಲ. *🙏🌺ಶುಭದಿನವಾಗಲಿ🌺🙏*

  • 🚩🔯🌸🌄⚛🌅🌸🔯🚩 🌸🌼ಬೆಳಗಿನ 🌅 ಸೂಳ್ನುಡಿ🌼🌸 *ಪ್ರತ್ಯಕ್ಷೇಣಾನುಮಾನೇನ* *ತಥೌಪಮ್ಯಾಗಮೈರಪಿ |* *ಪರೀಕ್ಷ್ಯಾಸ್ತೇ ಮಹಾರಾಜ* *ಸ್ವೇ ಪರೇ ಚೈವ ನಿತ್ಯಶಃ ||* (ಮಹಾಭಾರತ) _ರಾಜನಾದವನು ಪ್ರತ್ಯಕ್ಷ, ಅನುಮಾನ, ಉಪಮಾನ ಹಾಗೂ ಆಗಮ ಈ ನಾಲ್ಕು ಪ್ರಮಾಣಗಳನ್ನು ಅವಲಂಬಿಸಿ ತನ್ನವರು ಯಾರು? ಶತ್ರುಗಳು ಯಾರು? ಎಂಬುದನ್ನು ನಿತ್ಯವೂ ಪರೀಕ್ಷಿಸುತ್ತಾ ಇರಬೇಕು._ ಇಲ್ಲಿ ಪ್ರತ್ಯಕ್ಷಪ್ರಮಾಣವೆಂದರೆ, ಇಂದ್ರಿಯಗೋಚರವಾಗುವ ವಿಷಯಗಳು. ಸ್ಪಷ್ಟವಾದ ಆಧಾರ. ಅನುಮಾನಪ್ರಮಾಣವೆಂದರೆ, ಊಹೆಯಿಂದ ಸಿದ್ಧವಾಗುವುದು. ಕಣ್ಣು ಹಾಗೂ ಮುಖದಲ್ಲಿನ ಭಾವವನ್ನು, ಚೇಷ್ಟೆಯನ್ನು ಗುರುತಿಸಿ ತಿಳಿಯುವುದು. ಉಪಮಾನಪ್ರಮಾಣವೆಂದರೆ, ಹೋಲಿಕೆಗಳಿಂದ ವಿಷಯವನ್ನು ತಿಳಿಯುವುದು. ಹಿಂದಿನ ಯಾವುದೇ ಘಟನೆ ಅಥವಾ ಕಾರಣಗಳನ್ನು ಹೋಲಿಸಿ ಇಲ್ಲಿನ ಪ್ರಕರಣವನ್ನು ಅರ್ಥಮಾಡಿಕೊಳ್ಳುವುದು. ಆಗಮಪ್ರಮಾಣವೆಂದರೆ, ಶಾಸ್ತ್ರಗಳ ಆಧಾರದಿಂದ ಪ್ರಕರಣವನ್ನು ಅರ್ಥೈಸಿ ತೀರ್ಮಾನಿಸುವುದು. ಇದಲ್ಲದೇ ಆಪ್ತವಾಕ್ಯ ಪ್ರಮಾಣವೂ ಇದೆ. ಹೀಗೆ ತನ್ನ ಸುತ್ತಲಿನ ವಿಷಯಗಳನ್ನು ಪ್ರಮಾಣೀಕರಿಸಿಯೇ ನೋಡುವುದು ರಾಜನ ಕರ್ತವ್ಯ. *🌷🌺🙏 ☆ ಶುಭದಿನವಾಗಲಿ! ☆ 🙏🌺🌷*

  • *ದುರ್ವಾಸ ಮುನಿಯ ಶಾಪ* ಸತ್ಯಯುಗದಲ್ಲಿ, ಮಹಾನ್ ಋಷಿ ದುರ್ವಾಸ ಮುನಿಗಳು 'ವಿಮಲಕುಂಡ' ಎಂಬ ಪವಿತ್ರ ಸರೋವರದ ತೀರದಲ್ಲಿ ತಮ್ಮ ನಿವಾಸವನ್ನು ನಿರ್ಮಿಸಿಕೊಂಡಿದ್ದರು. ದುರ್ವಾಸ ಮುನಿಗಳು ತಮ್ಮ ಕಠಿಣ ತಪಸ್ಸು ಮತ್ತು ಉದ್ದವಾದ ಜಟೆಗಳಿಗಾಗಿ ಪ್ರಸಿದ್ಧರಾಗಿದ್ದರು. ಅವರು ಸ್ನಾನ ಮಾಡಿದ ನಂತರ ಆಗಾಗ್ಗೆ ಸರೋವರದ ದಡದಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರ ಜಟೆಗಳು ತಲೆಯಿಂದ ಸಮೀಪದಲ್ಲಿದ್ದ ದೇವಾಲಯದ ಪ್ರವೇಶದ್ವಾರದವರೆಗೆ ಹರಡಿಕೊಂಡಿರುತ್ತಿದ್ದವು. ಒಂದು ದಿನ, ಅಲ್ಲಿನ ಕೆಲವು ತುಂಟ ಹುಡುಗರು ಋಷಿಯನ್ನು ನೋಡಿ ಅವರ ಅಸಾಧಾರಣ ಉದ್ದವಾದ ಜಟೆಗಳನ್ನು ಹಾಸ್ಯ ಮಾಡಲಾರಂಭಿಸಿದರು. ಅವರು ಜೋರಾಗಿ ನಗುತ್ತಾ ಮುನಿಗಳನ್ನು ಅಪಹಾಸ್ಯ ಮಾಡಿದರು. ದುರ್ವಾಸ ಮುನಿಗಳು, ಭಗವಾನ್ ಶಿವನಂತೆಯೇ, ಸುಲಭವಾಗಿ ಪ್ರಸನ್ನರಾಗುವವರೂ ಹಾಗೂ ಅಷ್ಟೇ ಸುಲಭವಾಗಿ ಕೋಪಗೊಳ್ಳುವವರೂ ಆಗಿದ್ದರು. ಇಂತಹ ಅವಮಾನವನ್ನು ಅವರು ಸಹಿಸಲಿಲ್ಲ. ಹುಡುಗರ ಈ ಅಪಹಾಸ್ಯದಿಂದ ಋಷಿಯವರಿಗೆ ತೀವ್ರ ಕೋಪ ಬಂದು, ಕೋಪದ ಆವೇಶದಲ್ಲಿ ಅವರಲ್ಲಿದ್ದ ಒಬ್ಬ ಬಾಲಕನಿಗೆ ಮೊಸಳೆಯಾಗುವ ಶಾಪ ನೀಡಿದರು. ಆ ಚಿಕ್ಕ ಬಾಲಕನಿಗೆ ತನ್ನ ದೊಡ್ಡ ತಪ್ಪಿನ ಅರಿವಾದ ತಕ್ಷಣ, ಅವನು ತೀವ್ರ ಪಶ್ಚಾತ್ತಾಪಪಟ್ಟು ದುರ್ವಾಸ ಮುನಿಗಳ ಪಾದಗಳಲ್ಲಿ ಬಿದ್ದು ಕ್ಷಮೆ ಬೇಡಿದನು. ಶಾಪದ ಸ್ವರೂಪ ಮತ್ತು ಕರುಣೆಯ ವರ ಬಾಲಕನ ಪಶ್ಚಾತ್ತಾಪವನ್ನು ಕಂಡು ದುರ್ವಾಸ ಮುನಿಗಳ ಹೃದಯ ಕರಗಿತು. ಆದರೆ ಅವರು ನೀಡಿದ ಶಾಪದ ನಿಯಮಕ್ಕೆ ತಾವೇ ಬದ್ಧರಾಗಿದ್ದರು. ವೈದಿಕ ಋಷಿಗಳ ಸಂಪ್ರದಾಯದಲ್ಲಿ, ಒಮ್ಮೆ ಶಾಪ ನೀಡಿದ ನಂತರ ಅದನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೂ ತಮ್ಮ ಕರುಣೆಯಿಂದ ಅವರು ಒಂದು ಮಾರ್ಗವನ್ನು ತಿಳಿಸಿದರು. ಅವರು ಬಾಲಕನಿಗೆ ಹೇಳಿದರು: "ನೀನು ನನ್ನನ್ನು ಅಪಹಾಸ್ಯ ಮಾಡಿದ್ದರಿಂದ ಹಾಗೂ ತುಂಟತನದಿಂದ ವರ್ತಿಸಿದ್ದರಿಂದ, ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗದವರೆಗೆ ಭೂಮಿಯ ಮೇಲೆ ಮೊಸಳೆಯಾಗಿ ಸಂಚರಿಸಬೇಕು." ಆದರೆ ಋಷಿಗಳು ಅವನನ್ನು ಸಂಪೂರ್ಣ ನಿರಾಶನಾಗಿಸಲಿಲ್ಲ. ಅವರು ಮುಂದುವರಿದು ಹೇಳಿದರು: "ಈ ಅರಣ್ಯದ ಅಧಿಪತಿಯಾದ ಭಗವಾನ್ ಶ್ರೀಕೃಷ್ಣನು ಕಲಿಯುಗದಲ್ಲಿ ನವದ್ವೀಪದಲ್ಲಿ ಶಚಿದೇವಿಯ ಪುತ್ರನಾದ ಶಚೀನಂದನನಾಗಿ ಅವತರಿಸಿದಾಗ, ತಮ್ಮ ನಾಮಸಂಕೀರ್ತನೆಯ ಶಕ್ತಿಯಿಂದ ನಿನ್ನ ಉದ್ಧಾರ ಮಾಡುತ್ತಾರೆ. ಅವರು ಈ ಪವಿತ್ರ ಮಹಾಮಂತ್ರವನ್ನು ಕೀರ್ತಿಸುವಾಗ— ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ —ಆಗ ನೀನು ನನ್ನ ಶಾಪದಿಂದ ಮುಕ್ತನಾಗಿ, ನಿನ್ನ ಮೂಲ ಆಧ್ಯಾತ್ಮಿಕ ಸ್ವರೂಪವನ್ನು ಪುನಃ ಪಡೆಯುವೆ." ಬಾಲಕನ ರೂಪಾಂತರ ಅದೇ ಕ್ಷಣದಲ್ಲಿ ಆ ಬಾಲಕನು ಮೊಸಳೆಯಾಗಿ ಪರಿವರ್ತನೆಯಾದನು ಮತ್ತು ನವದ್ವೀಪದ ಮಾಯಾಪುರದಲ್ಲಿರುವ ಗೋದ್ರುಮ ದ್ವೀಪದ ಒಂದು ಸರೋವರದಲ್ಲಿ ವಾಸಿಸಲು ಆರಂಭಿಸಿದನು. ಅವನು ಯುಗಗಳ ಕಾಲ ಅಲ್ಲಿಯೇ ಇದ್ದನು. ಆ ಸರೋವರದ ಇತರ ಜೀವಿಗಳನ್ನು ಭಯಪಡಿಸುತ್ತಿದ್ದನು ಹಾಗೂ ನೀರಿನ ತೀರಕ್ಕೆ ಬರುವ ಮನುಷ್ಯರ ಮೇಲೆಯೂ ದಾಳಿ ಮಾಡುತ್ತಿದ್ದನು. ಭಯಾನಕ ಮತ್ತು ಅಪಾಯಕಾರಿ ಮೊಸಳೆಯಾಗಿ ಅವನ ಕುಖ್ಯಾತಿ ದೂರದೂರಿಗೂ ಹರಡಿತು. ಚೈತನ್ಯ ಮಹಾಪ್ರಭುವಿನ ಆಗಮನ ಅನೇಕ ಯುಗಗಳು ಕಳೆದ ನಂತರ, ಕಲಿಯುಗ ಪ್ರಾರಂಭವಾದಾಗ, ಭಗವಾನ್ ಶ್ರೀಕೃಷ್ಣನ ಸುವರ್ಣಾವತಾರರಾದ ಶ್ರೀಚೈತನ್ಯ ಮಹಾಪ್ರಭು, ಮಾಯಾಪುರದಲ್ಲಿ ನಿಮಾಯಿ ಪಂಡಿತ ಎಂಬ ಹೆಸರಿನಲ್ಲಿ ಅವತರಿಸಿದರು. ತಮ್ಮ ಬಾಲಲೀಲೆಗಳು ಮತ್ತು ಅದ್ಭುತ ಪಾಂಡಿತ್ಯಕ್ಕಾಗಿ ಪ್ರಸಿದ್ಧರಾಗಿದ್ದ ನಿಮಾಯಿ, ಆಗಾಗ್ಗೆ ತಮ್ಮ ಸ್ನೇಹಿತರೊಂದಿಗೆ ನವದ್ವೀಪದ ಪವಿತ್ರ ಭೂಮಿಯಲ್ಲಿ ಆಟವಾಡುತ್ತಿದ್ದರು. ಒಂದು ಬೇಸಿಗೆಯ ದಿನ, ನಿಮಾಯಿ ಮತ್ತು ಅವರ ಸ್ನೇಹಿತರು ಆಟವಾಡುತ್ತಿದ್ದಾಗ, ಅದೇ ಮೊಸಳೆ ವಾಸಿಸುತ್ತಿದ್ದ ಸರೋವರದಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಅವರ ಈ ನಿರ್ಧಾರವನ್ನು ಕೇಳಿದ ಕೆಲವು ಗೋಪಾಲಕರು ಅವರನ್ನು ಎಚ್ಚರಿಸಿದರು: "ನಿಮಾಯಿ! ಆ ಸರೋವರದ ಬಳಿ ಹೋಗಬೇಡ. ಅಲ್ಲಿ ಭಯಾನಕ ಮೊಸಳೆ ವಾಸಿಸುತ್ತಿದೆ. ಅದು ಮನುಷ್ಯರನ್ನು, ವಿಶೇಷವಾಗಿ ಮಕ್ಕಳನ್ನು ತಿನ್ನುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ತುಂಬಾ ಅಪಾಯಕಾರಿ. ದಯವಿಟ್ಟು ಮನೆಗೆ ಹಿಂದಿರುಗು." ಆದರೆ ನಿಮಾಯಿ ಚಪಲ ನಗೆಯೊಂದಿಗೆ ಆತ್ಮವಿಶ್ವಾಸದಿಂದ ಹೇಳಿದರು: "ಏನಾಗುತ್ತದೆ ನೋಡಿ!" ಎಂದು ಹೇಳಿ ಸರೋವರದ ಕಡೆಗೆ ನಡೆದು, ಸೊಂಟದವರೆಗೆ ನೀರಿನಲ್ಲಿ ಇಳಿದರು. ಅವರು ನೀರಿನಲ್ಲಿ ಇಳಿದ ತಕ್ಷಣ, ಆ ಭಯಾನಕ ಮೊಸಳೆ ನೀರಿನಿಂದ ಹೊರಬಂದು ತನ್ನ ದೊಡ್ಡ ದವಡೆಗಳನ್ನು ತೆರೆದು ನಿಮಾಯಿಯ ಕಡೆಗೆ ಬರತೊಡಗಿತು. ಪವಿತ್ರ ನಾಮದ ಮಹಿಮೆ ನಿಮಾಯಿ ಸ್ವಲ್ಪವೂ ಭಯಪಡಲಿಲ್ಲ. ಅವರು ತಮ್ಮ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮಹಾಮಂತ್ರದ ಸಂಕೀರ್ತನೆಯನ್ನು ಆರಂಭಿಸಿದರು: ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ ಕಲಿಯುಗಧರ್ಮವನ್ನು ಸ್ಥಾಪಿಸಿದ ಯುಗಾವತಾರರಾದ ಶ್ರೀಚೈತನ್ಯ ಮಹಾಪ್ರಭುವಿನ ಕಮಲಮುಖದಿಂದ ಹೊರಬಂದ ಈ ಪವಿತ್ರ ನಾಮವನ್ನು ಆ ಮೊಸಳೆ ಕೇಳಿದ ತಕ್ಷಣ ಒಂದು ಮಹಾ ಅದ್ಭುತ ನಡೆಯಿತು. ಮೊಸಳೆಯು ತನ್ನ ದವಡೆಗಳನ್ನು ಮುಚ್ಚಿ ನಿಧಾನವಾಗಿ ನಿಮಾಯಿಯ ಕಡೆಗೆ ಈಜುತ್ತಾ ಬಂತು. ಅದರ ಸ್ವಭಾವ ಸಂಪೂರ್ಣವಾಗಿ ಬದಲಾಗಿತ್ತು. ಸಹಸ್ರಾರು ವರ್ಷಗಳಿಂದ ಆ ಸರೋವರದಲ್ಲಿ ಭಯ ಹುಟ್ಟಿಸುತ್ತಿದ್ದ ಆ ಜೀವಿ ಅತ್ಯಂತ ವಿನಯದಿಂದ ತನ್ನ ಮೂಗನ್ನು ನಿಮಾಯಿಯ ಕಮಲಚರಣಗಳಲ್ಲಿ ಇಟ್ಟಿತು. ಅದೇ ಕ್ಷಣದಲ್ಲಿ ದುರ್ವಾಸ ಮುನಿಗಳ ಶಾಪವು ಅಂತ್ಯಗೊಂಡಿತು. ಮೊಸಳೆಯು ತನ್ನ ಮೂಲ ಆಧ್ಯಾತ್ಮಿಕ ಸ್ವರೂಪವನ್ನು ಪುನಃ ಪಡೆದುಕೊಂಡಿತು. ಅಲ್ಲಿದ್ದ ಎಲ್ಲರ ಕಣ್ಮುಂದೆಯೇ ಅದು ದಿವ್ಯ ರೂಪವನ್ನು ಧರಿಸಿ, ಭಗವಾನ್ ಶ್ರೀಕೃಷ್ಣನ ಶಾಶ್ವತ ಧಾಮವಾದ ಗೋಲೋಕ ವೃಂದಾವನಕ್ಕೆ ಪ್ರಯಾಣಿಸಿತು. ಸಮಾರೋಪ : ಚೈತನ್ಯ ಮಹಾಪ್ರಭುವಿನ ಕೃಪೆ ಈ ಕಥೆಯು ಭಗವಂತನ ಪವಿತ್ರ ನಾಮದ ರೂಪಾಂತರಕಾರಿ ಶಕ್ತಿಯ ಅದ್ಭುತ ಉದಾಹರಣೆಯಾಗಿದೆ. ತನ್ನ ಅಪರಾಧದಿಂದ ಯುಗಗಳ ಕಾಲ ಮೊಸಳೆಯಾಗಿ ಬದುಕಬೇಕಾದ ಆ ಬಾಲಕನು, ಅಂತಿಮವಾಗಿ ಶ್ರೀಚೈತನ್ಯ ಮಹಾಪ್ರಭುವಿನ ಅಪಾರ ಕೃಪೆಯಿಂದ ಮತ್ತು ಹರೆ ಕೃಷ್ಣ ಮಹಾಮಂತ್ರದ ಸಂಕೀರ್ತನೆಯಿಂದ ಶಾಪಮುಕ್ತನಾಗಿ ತನ್ನ ದಿವ್ಯ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯು ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ನಮ್ಮ ಪರಿಸ್ಥಿತಿಗಳು ಅಥವಾ ಹಿಂದಿನ ಕರ್ಮಗಳು ಎಷ್ಟೇ ಗಂಭೀರವಾಗಿದ್ದರೂ, ಭಗವಂತನ ಕರುಣೆ ಅನಂತವಾಗಿದೆ. ನಿಜವಾದ ಭಕ್ತಿ ಮತ್ತು ಅವರ ಪವಿತ್ರ ನಾಮದ ಜಪದಿಂದ ಮುಕ್ತಿ ಹಾಗೂ ದೈವಿಕ ಕೃಪೆ ಯಾವಾಗಲೂ ದೊರೆಯುತ್ತದೆ.

  • ಜಾತಕದಲ್ಲಿ 2ನೇ ಮನೆ speech ಹೇಳುತ್ತದೆ ಇನ್ನು ಸಂವಹನ ಅಥವಾ communication ನ್ನು ಬುಧ ಹೇಳುತ್ತಾನೆ. ಹೀಗಾಗಿ quality of speech ತಿಳಿಯಲು ಬುಧ ನಿಂದ 2ನೇ ಮನೆ ನೋಡಿ ತಿಳಿಯಬೇಕು. ಬುಧ ಅಂದರೆ ಸಂವಹನ ಬುದ್ಧಿವಂತಿಕೆ analytical thinking, logic ಆಗಿದ್ದು ನಮ್ಮ ಮಾತಿನ tone ನ ಕ್ವಾಲಿಟಿ & ಮಾತಿನ impact ಗೆ ಕಾರಣ ಆಗಿರುವನು. ಬುಧ ಇರುವ ಮನೆಯು ವ್ಯಕ್ತಿಯ thought process ಹೇಳಿದರೆ ಬುಧನಿಂದ 2ನೇ ಮನೆಯು ಆ ಮಾತು ಇನ್ನೊಬ್ಬರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ 1)ಬುಧನಿಂದ 2 ರಲ್ಲಿ ರವಿ ಇದ್ದಾಗ ಆ ವ್ಯಕ್ತಿ ಅಧಿಕಾರಯುತವಾಗಿ ದರ್ಪ ಸಹಿತ ಗತ್ತು ಗೈರತ್ತು ಜೊತೆಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾನೆ. ಹೀಗಾಗಿ ಎಲ್ಲೆ ಮಾತನಾಡಿದರೂ ಅದಕ್ಕೆ ಗೌರವ & ಗಮನ ಕೊಡುತ್ತಾರೆ. ಇಡೀ ಮಾತುಕತೆಯ ಸಭಾಪತಿ ರೀತಿ ವರ್ತಿಸುತ್ತಾರೆ. 2) ಬುಧ ನಿಂದ 2 ರಲ್ಲಿ ಚಂದ್ರ ಮಾತು ಕಾಳಜಿ ಸಹಿತ ಭಾವನಾ ಪ್ರಧಾನ ಮಾತಿಗೆ ಮೊದಲು ಊಟ ಆಯ್ತಾ ಬ್ರೇಕ್ ಫಾಸ್ಟ್ ಆಯ್ತಾ ಟೀ ಆಯ್ತಾ ಅಂತ ಶುರು ಮಾಡುತ್ತಾರೆ ಮಾತು ಅನುನಯದೊಂದಿಗೆ ಸಂಗೀತ ಅನ್ನಿಸುತ್ತದೆ ಮೂಡ್ ಮೇಲೆ ಮಾತು ಒಳ್ಳೆಯ storyteller ತರಹ   3) ಬುಧನಿಂದ 2 ರಲ್ಲಿ ಮಂಗಳ ಇದ್ದಾಗ assertive agressive passionate motivational ಮಾತು ಲೀಡರ್ ಶಿಪ್ ರೋಲ್ ಇದ್ದವರಿಗೆ ಒಳ್ಳೆಯ ಪ್ಲೇಸ್ ಮೆಂಟ್ ಇನ್ನು strong argument ಇರುವ ಉದ್ಯೋಗಕ್ಕೂ ಒಳ್ಳೆಯ ಪ್ಲೇಸ್ ಮೆಂಟ್ 4) ಬುಧನಿಂದ 2 ರಲ್ಲಿ ಗುರು ಆಶಾವಾದಿ ಬುದ್ಧಿವಂತಿಕೆ ಮಾತು ಅಧ್ಯಾತ್ಮದ ಟಚ್ ನೈತಿಕತೆಗೆ ಪ್ರಾಧಾನ್ಯ ಒಂದು ರೀತಿ ಪ್ರೇರಣಾದಾಯಕ ಮಾತು ಇನ್ನೊಬ್ಬರಿಗೆ ಗೈಡ್ ಟೀಚ್ ರೀತಿ ಮಾತು 5) ಬುಧನಿಂದ 2 ರಲ್ಲಿ ಶುಕ್ರ sweet, charming ಮಾತುಕತೆ ಡಿಪ್ಲೋಮ್ಯಾಟಿಕ್ ಸಂಬಂಧ ಕಟ್ಟುವ ರೀತಿ ಮಾಡು , ಮಿಡಿಯೇಟರ್ ರೀತಿ ಮಾತು 6) ಬುಧನಿಂದ 2 ರಲ್ಲಿ ಶನಿ ಗಂಭೀರ ಮಾತು ಇನ್ನೊಬ್ಬರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ನಿಧಾನ ಮಾತು , ಮೆಚುರ್ ಮಾತು deliberately ಮಾತು 7) ಬುಧ ನಿಂದ 2 ರಲ್ಲಿ ರಾಹು confuse ಮಾಡುವ ಮಾತು unpredictable ಮಾತು ಚಮತ್ಕಾರಗಳ ಕುರಿತು ಮಾತು , unnecessary ಮಾತು 8) ಬುಧ ನಿಂದ 2 ರಲ್ಲಿ ಕೇತು cryptic ಅಧ್ಯತ್ಮ ಕುರಿತು insightful ಮಾತು ಒಂದು ರೀತಿ ಹೆಚ್ಚಿಗೆ ಮಾತು ಬೇಡ ಎಂಬ ಮುನ್ನುಡಿ ಅನಿಸುತ್ತದೆ.

  • Photo from Srikanth Matrubai

  • Photo from Srikanth Matrubai

  • 🚩🌺🌅🌺🚩 *ಮುಂಜಾನೆಯ ಸೂಳ್ನುಡಿ*   ಕಲ್ಪಸೂತ್ರಗಳಲ್ಲಿ ಉಪಾಸನಾದಿಗಳನ್ನು ಹೇಳದಿರುವುದರಿಂದ ಅನುಷ್ಠಾನವು ಸಂಭವಿಸಲಾರದು - ಎಂಬ ಸಂಶಯಕ್ಕೆ ಉತ್ತರಿಸುತ್ತಾರೆ : *ಉಪಾಸ್ತೀನಾಮನುಷ್ಠಾನಮಾರ್ಷಗ್ರಂಥೇಷು ವರ್ಣಿತಂ |* *ವಿಚಾರಾಕ್ಷಮಮರ್ತ್ಯಾಶ್ಚ ತಚ್ಛ್ರುತ್ವೋಪಾಸತೇ ಗುರೋಃ ||* ಉಪಾಸನೆಗಳ ಅನುಷ್ಠಾನವನ್ನು ಬ್ರಾಹ್ಮ, ವಾಸಿಷ್ಠ ಮೊದಲಾದ ಮಂತ್ರಕಲ್ಪಗಳಲ್ಲಿ ವಿವರಿಸಲ್ಪಟ್ಟಿದೆ. ತಾವೇ ವಿಚಾರಮಾಡುವುದಕ್ಕೆ ಸಮರ್ಥರಲ್ಲದ ಮನುಷ್ಯರು ಆ ಉಪಾಸನೆಯನ್ನು ಗುರುಗಳಿಂದರಿತು ಉಪಾಸನೆಮಾಡುವರು. *(ಧ್ಯಾನದೀಪ ಪ್ರಕರಣ)* ಮುಂದುವರಿಯುತ್ತದೆ.. 1. *ಶ್ಲೋಕದ ಪದಪದ ಅರ್ಥ:* _ಉಪಾಸ್ತೀನಾಮ್ ಅನುಷ್ಠಾನಮ್ ಆರ್ಷಗ್ರಂಥೇಷು ವರ್ಣಿತಂ_  ಉಪಾಸನೆಗಳ ಆಚರಣಾ ವಿಧಾನವನ್ನು ಋಷಿಗಳು ಬರೆದಿರುವ ಗ್ರಂಥಗಳಲ್ಲಿ ವಿವರಿಸಲಾಗಿದೆ.  ಇಲ್ಲಿ "ಆರ್ಷಗ್ರಂಥ" ಎಂದರೆ ಬ್ರಹ್ಮಕಲ್ಪ, ವಾಸಿಷ್ಠಕಲ್ಪ, ಶಾಂಡಿಲ್ಯಕಲ್ಪ ಮುಂತಾದ ಮಂತ್ರಕಲ್ಪಗಳು. ಅವುಗಳಲ್ಲಿ ಯಾವ ದೇವತೆಯನ್ನು ಯಾವ ಮಂತ್ರದಿಂದ, ಯಾವ ಆಸನದಲ್ಲಿ, ಯಾವ ಕಾಲದಲ್ಲಿ ಉಪಾಸಿಸಬೇಕು ಎಂಬುದು ಎಲ್ಲಾ ಇರುತ್ತದೆ. _ವಿಚಾರಾಕ್ಷಮ್ ಅಮರ್ತ್ಯಾಃ ಚ ತತ್ ಶ್ರುತ್ವಾ ಉಪಾಸತೇ ಗುರೋಃ_  ವಿಚಾರ ಮಾಡುವ ಸಾಮರ್ಥ್ಯ ಇಲ್ಲದ ಸಾಮಾನ್ಯ ಮನುಷ್ಯರು, ಆ ಗ್ರಂಥಗಳನ್ನು ಗುರುಗಳಿಂದ ಕೇಳಿ ತಿಳಿದುಕೊಂಡು ಉಪಾಸನೆ ಮಾಡುತ್ತಾರೆ. 2. ಈ ಶ್ಲೋಕ ಯಾಕೆ ಬಂತು? ಪೂರ್ವಪಕ್ಷ: "ವೇದದಲ್ಲಿ ಕರ್ಮಕಾಂಡ ಇದೆ, ಜ್ಞಾನಕಾಂಡ ಇದೆ. ಆದರೆ ಉಪಾಸನಾ ಕಾಂಡವನ್ನು ಪ್ರತ್ಯೇಕವಾಗಿ ಕಲ್ಪಸೂತ್ರಗಳು ಹೇಳಿಲ್ಲ. ಹಾಗಾಗಿ ಉಪಾಸನೆ ಮಾಡಲು ಪ್ರಮಾಣವೇ ಇಲ್ಲವಲ್ಲ" ಎಂಬ ಸಂಶಯ. ಸಿದ್ಧಾಂತ: "ಇಲ್ಲ, ಉಪಾಸನೆಗೆ ಪ್ರಮಾಣ ಇದೆ. ಅದು ಆರ್ಷಕಲ್ಪಗಳಲ್ಲಿ ಇದೆ. ಎಲ್ಲರಿಗೂ ಆ ಗ್ರಂಥ ಓದಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಗುರುವಿನ ಅವಶ್ಯಕತೆ ಇದೆ. ಗುರುವೇ ಶಾಸ್ತ್ರವನ್ನು ಸರಳವಾಗಿ ಹೇಳಿಕೊಟ್ಟು, ಅನುಷ್ಠಾನಕ್ಕೆ ತರುತ್ತಾರೆ" ಎಂದು ಉತ್ತರ. 3. ಪ್ರಮುಖ 3 ಅಂಶ 1. *ಶಾಸ್ತ್ರ ಆಧಾರ*: ಉಪಾಸನೆ ಮನಸ್ಸಿಗೆ ಬಂದಂತೆ ಅಲ್ಲ. ಋಷಿಪ್ರೋಕ್ತ ಗ್ರಂಥದ ಆಧಾರ ಇರಲೇಬೇಕು. 2. *ಗುರುವಿನ ಪಾತ್ರ*: ಸ್ವತಃ ವಿಚಾರ ಮಾಡಲಾಗದವರಿಗೆ ಗುರುವೇ ಕಣ್ಣು. ಕೇಳಿ, ಅರ್ಥಮಾಡಿಕೊಂಡು, ಆಚರಿಸುವುದು ಮಾರ್ಗ. 3. *ಅಧಿಕಾರ ಭೇದ*: ಯಾರಿಗೆ ವಿಚಾರಶಕ್ತಿ ಇದೆಯೋ ಅವರು ಗ್ರಂಥ ನೋಡಬಹುದು. ಇಲ್ಲದವರು ಗುರುವನ್ನು ಆಶ್ರಯಿಸಬೇಕು. ಎರಡೂ ದಾರಿಯೂ ಸರಿ. ಸರಳವಾಗಿ ಹೇಳುವುದಾದರೆ: "ಪುಸ್ತಕದಲ್ಲಿ ಎಲ್ಲಾ ಇದೆ. ಆದರೆ ಪುಸ್ತಕ ಓದಲು ಬಾರದವರಿಗೆ ಮಾರ್ಗದರ್ಶಕರು ಬೇಕು. ಆ ಮಾರ್ಗದರ್ಶಕರೇ ಗುರುಗಳು". *🙏🌺ಶುಭದಿನವಾಗಲಿ🌺🙏*

  • 🚩🔯🌸🌄⚛🌅🌸🔯🚩 🌸🌼ಬೆಳಗಿನ 🌅 ಸೂಳ್ನುಡಿ🌼🌸 *ಸತ್ಯಂ ನ ಸತ್ಯಂ ಖಲು ಯತ್ರ ಹಿಂಸಾ* *ದಯಾನ್ವಿತಂ ಚಾನೃತಮೇವ ಸತ್ಯಮ್ |* *ಹಿತಂ ನರಾಣಾಂ ಭವತೀಹ ಯೇನ* *ತದೇವ ಸತ್ಯಂ ನ ತಥಾನ್ಯಥೈವ ||* ಸತ್ಯವನ್ನು ಹೇಳುವದರಿಂದ ಎಲ್ಲಿ ಹಿಂಸೆಯಾಗುತ್ತದೆಯೊ ಅದು ಸತ್ಯವಲ್ಲ. ಹಿಂಸೆಯು ತಪ್ಪುವಂತೆ ದಯೆಯಿಂದ ಕೂಡಿದ ಸುಳ್ಳು ಸತ್ಯವೆಂದೇ ಆಗುವುದು. ಆದ್ದರಿಂದ ಜೀವಿಗಳಿಗೆ ಯಾವುದು ಹೇಳಿದರೆ ಒಳ್ಳೆಯದಾಗುವುದೊ ಅದೇ ಸತ್ಯವು ಮತ್ತು ಸತ್ಯಪರತೆಯು. ಹೀಗಲ್ಲದ್ದು ಸತ್ಯವಾಗುವುದಿಲ್ಲ. (ಅಧ್ಯಾತ್ಮ ಪ್ರಕಾಶ-ಜುಲೈ 27) *🌷🌺🙏 ☆ ಶುಭದಿನವಾಗಲಿ! ☆ 🙏🌺🌷*

  • ಜಾತಕದಲ್ಲಿ 12 ಮನೆಗಳು 9 ಗ್ರಹಗಳು ಅಂದಾಗ ಕೆಲವೊಂದು ಮನೆಗಳು ಖಾಲಿ ಆಗಿ ಉಳಿಯುತ್ತವೆ. ಖಾಲಿ ಮನೆ ಬೇರೆ ಕತ್ತಲು ಕವಿದ ಮನೆ ಬೇರೆ ಅಂತ ಗೊತ್ತಿರಬೇಕು. ಹಾಗಾದರೆ *ಕತ್ತಲು ಕವಿದ ಮನೆ* ಎಂದರೇನು?      ಉದಾಹರಣೆಗೆ ಜಾತಕದಲ್ಲಿ 1,3,4,5,12 ರಲ್ಲಿ ಗ್ರಹಗಳಿಲ್ಲ ಆದರೆ ಆ ಮನೆಗಳಿಗೆ ಒಂದಿಲ್ಲ ಒಂದು ಗ್ರಹದ ದೃಷ್ಟಿ ಇದೆ ಹಾಗೆನೇ 2,6,7,8,10,11 ರಲ್ಲಿ ಗ್ರಹಗಳಿವೆ. ಉಳಿದ ಮನೆಯಾದ 9ನೇ ಮನೆಯಲ್ಲಿ ಗ್ರಹ ಇಲ್ಲ ಹಾಗೂ ಯಾವುದೇ ಬೇರೆ ಗ್ರಹದ ದೃಷ್ಟಿಯೂ ಇಲ್ಲ ಆಗ ಈ 9 ನೇ ಮನೆಗೆ ಕತ್ತಲು ಕವಿದ ಮನೆ ಅನ್ನುತ್ತಾರೆ. ಜಾತಕರಿಗೆ 9 ನೇ ಮನೆ ಹೇಳುವ ಗುರು ಮೆಂಟರ್ timely ಸಿಗಲ್ಲ ಸಿಕ್ಕರೂ ಅವರು ಹೇಳಿದ ಸಲಹೆ ಪಾಲಿಸಲ್ಲ, ದೂರದ ಪಯಣ ಕಷ್ಟ ಕೋಟಲೆ ತರುತ್ತದೆ, ತಂದೆ ಕೂಡ ತಿಕ್ಕಾಟ, ಪರಾವಲಂಬಿ ಜೀವನ, ಸ್ವಧರ್ಮದ ನಂಬಿಕೆಗಳ ಕುರಿತು ಗೊಂದಲ ಕಾಡುತ್ತವೆ. ಇನ್ನು ಏನಾದರೂ 9ನೇ ಮನೆ ಅಧಿಪತಿ ಚೆನ್ನಾಗಿದ್ದರೆ 2nd half like ಜೀವನದಲ್ಲಿ ಅಂದರೆ ಇಳಿ ವಯಸ್ಸಿನಲ್ಲಿ ಪ್ರಗತಿ ಆಗುತ್ತದೆ.     ಉದಾಹರಣೆಗೆ ಸಿಂಹ ಲಗ್ನ ಆಗಿ 9 ನೇ ಮನೆ ಆಗುವ ಮೇಷ ಕತ್ತಲು ಕವಿದ ಮನೆ ಆದಾಗ ಅವರಿಗೆ recognition ಸಿಗಲ್ಲ, ಪ್ರಗತಿ ಕಡಿಮೆ, wrong decissions ತೆಗೆದುಕೊಳ್ಳುತ್ತಾರೆ. ಯಾವ ಭಾವ/ಮನೆ ಕತ್ತಲು ಕವಿದ ಮನೆ ಆಗುತ್ತದೆಯೋ ಆ ಮನೆ ಸಂಬಂಧಿತ ತೊಂದರೆ ಆಗುತ್ತವೆ.

  • *💫ಗ್ರಹಣ ನಿರ್ಣಯ* ೧೨ ಅಗಸ್ಟ ಸಂಭವಿಸುವ ಸೂರ್ಯ ಗ್ರಹಣ ಭಾರತಕ್ಕೆ ಕಾಣಿಸುವುದಿಲ್ಲ ಹಾಗಾಗಿ ಯಾವುದೇ ಆಚರಣೆ ಇರುವುದಿಲ್ಲ ಹೋಮ,ಶಾಂತಿ,ದಾನ ಮಾಡುವ ಅಗತ್ಯವಿಲ್ಲ ಯಾರು *ಟಿವಿ ಅಥವಾ ಅನ್ಯ ಮಾಧ್ಯಮಗಳಲ್ಲಿ ಗೋಚರ ಆಗದಿದ್ದರು ಒಂದಿಷ್ಟು ಫಲವಿರುತ್ತೆ ಹಾಗಾಗಿ ಶಾಂತಿ ಮಾಡಬೇಕು ಎಂದು ಹೇಳುವುದು* ಇದಾವುದು ಶಾಸ್ತ್ರಸಮ್ಮತವಲ್ಲ ಹಾಗಾಗಿ ನೀವು ಪ್ರಬುದ್ಧರಾಗಿ ಶಾಸ್ತ್ರ ಹೇಳಿದ ಹಾಗೆ ಸಾಗಿದರೆ ಇಹ - ಪರ ಎರಡರಲ್ಲೂ ಶುಭ ಮನಸ್ಸಿಗೆ ತೊಚಿದಂಥೆ ನಡೆದರೆ ಅದರ ದಂಡವನ್ನು ನಾವು ಅನುಭವಿಸಲೆ ಬೇಕೆ